ಬೆಂಗಳೂರು: ತಾಯಿ ಕೆಲಸಕ್ಕೆ ಹೋದಾ ನಂತರ ಅಜ್ಜನೊಬ್ಬ ತನ್ನ 6 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಗರದ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಚ್ಚರಿ ಏನೆಂದರೆ ಈ ವಿಷಯ ಬಾಲಕಿಯ ಮನೆಯಲ್ಲಿ ತಿಳಿಯುತ್ತಿದ್ದ ಹಾಗೇ ಆರೋಪಿ ಮನೆಯಿಂದ ಎಸ್ಕೇಪ್ ಆಗಲು ಬಾಲಕಿಯ ತಂದೆ ಸಹಾಯ ಮಾಡಿದ್ದಾನೆ.
ಇನ್ನೂ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ವಿಚಾರ ತಿಳಿದ ನಂತರ ಆರೋಪಿ ಬಾಲಕಿಯ ತಾಯಿ ಅಂದರೆ ಸೊಸೆಗೆ ಆಸ್ತಿ ಮನೆ ನೀಡುವುದು ಹೇಳಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿ ಮನೆಯಿಂದ ಪರಾರಿಯಾಗಿದ್ದಾನೆ. ದುರಂತ ಅಂದ್ರೆ, ಆರೋಪಿ ಪರಾರಿಯಾಗಲು ಮಗನೇ (ಬಾಲಕಿ ತಂದೆ) ಸಹಕರಿಸಿದ್ದಾನೆ. ಈ ಬಗ್ಗೆ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಮಗಳಿಗೆ ನಡೆದ ಅತ್ಯಾಚಾರದ ವಿಚಾರ ಗೊತ್ತಿದ್ದು ದೂರು ನೀಡದೆ ಮುಚ್ಚಿಟ್ಟಿದ್ದ ಬಾಲಕಿಯ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.