ಸೀತಾ ಮಾತೆ ಮಂದಿರ ನಿರ್ಮಾಣಕ್ಕೆ 72.47 ಕೋಟಿ ಮೀಸಲು: ಅಮಿತ್ ಶಾ

Sampriya

ಗುರುವಾರ, 16 ಮೇ 2024 (18:57 IST)
ಸೀತಾಮಡಿ: ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ್ದೇವೆ. ಇನ್ನು ಸೀತಾ ಮಂದಿರವನ್ನು ನಿರ್ಮಾಣ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್​​ ಶಾ ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆ ಬಿಹಾರದ ಸೀತಾಮಡಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ನಾವು ಅಯೋದ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಿದ್ದೇವೆ. ಈಗ ಸೀತಾಮಡಿಯಲ್ಲಿ ಸೀತಾ ಮಾತೆಯ ಬೃಹತ್ ಮಂದಿರವನ್ನು ನಿರ್ಮಿಸುತ್ತೇವೆ ಎಂದಿದ್ದಾರೆ.

ಎನ್‌ಡಿಎ ಸರ್ಕಾರದಲ್ಲಿ ಸೀತಾಮಡಿ ಜಿಲ್ಲೆಯ 'ಪುನೌರ ಧಾಮ'ವನ್ನು ಅಂತರರಾಷ್ಟ್ರೀಯ ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದ್ದು, ಅಭಿವೃದ್ಧಿಗಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಪುಟ ₹ 72.47 ಕೋಟಿ ಮೀಸಲಿಟ್ಟಿದೆ ಎಂದು ಅಮಿತ್‌ ಶಾ ಹೇಳಿದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ