ರಾಮಮಂದಿರ ಬಳಿಕ ಸೀತಾ ಮಂದಿರ ನಿರ್ಮಾಣ ಮಾಡುತ್ತೇವೆ: ಅಮಿತ್ ಶಾ

Krishnaveni K

ಗುರುವಾರ, 16 ಮೇ 2024 (16:25 IST)
ಪಾಟ್ನಾ: ಅಯೋಧ‍್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಿಜೆಪಿಯ ಗುರಿಯಾಗಿತ್ತು. ಅದಾದ ಬಳಿಕ ಈಗ ಸೀತಾಮಂದಿರ ನಿರ್ಮಾಣ ಮಾಡಲಿದ್ದೇವೆ ಎಂದು ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

ಬಿಹಾರದಲ್ಲಿ ಚುನಾವಣಾ ರಾಲಿಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ಬಿಹಾರದ ಸೀತಾಮುರ್ಹಿಯಲ್ಲಿ ಸೀತಾಮಂದಿರ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ವೋಟ್ ಬ್ಯಾಂಕ್ ಗೆ ನಾವು ಹೆದರಲ್ಲ. ಮೋದಿ ನೇತೃತ್ವದಲ್ಲಿಯೇ ಸೀತಾ ಮಂದಿರ ನಿರ್ಮಾಣ ಮಾಡಲಿದ್ದೇವೆ ಎಂದಿದ್ದಾರೆ.

ರಾಮನನ್ನು ಆತನ ಜನ್ಮಸ್ಥಳದಿಂದ ದೂರವಿಟ್ಟಿದ್ದರು. ಆದರೆ ಸೀತಾ ಮಾತೆಯನ್ನು ಈಗ ಜನ್ಮಸ್ಥಳದಿಂದ ದೂರವಿಡಲು ಸಾಧ‍್ಯವಿಲ್ಲ. ಸೀತೆಯ ಜೀವನದಂತೆ ಆದರ್ಶಪ್ರಾಯವಾದ ದೇವಾಲಯನ್ನು ನರೇಂದ್ರ ಮೋದಿಯಿಂದ ಮಾತ್ರ ನಿರ್ಮಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಬಿಹಾರದ ಪ್ರಮುಖ ಕ್ಷೇತ್ರಗಳ ಪೈಕಿ ಸೀತಾಮುರ್ಹು ಕೂಡಾ ಒಂದು. ಇಲ್ಲಿ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ ಸೀತಾಮಂದಿರದ ಬಗ್ಗೆ ಮಾತನಾಡಿದ್ದಾರೆ.  ಹಿಂದೂ ಪುರಾಣದ ಪ್ರಕಾರ ಹೊಲ ಉಳುಮೆ ಮಾಡುತ್ತಿದ್ದಾಗ ಸೀತಾ ಮಾತೆ ಭೂಮಿಯ ಗರ್ಭದಿಂದ ಸಿಕ್ಕಿದ್ದು ಇದೇ ಜಾಗದಲ್ಲಿ. ಹೀಗಾಗಿ ಈ ಸ್ಥಳಕ್ಕೆ ವಿಶೇಷ ಪಾವಿತ್ರ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ