ರಾಜ್ಯದಲ್ಲಿಂದು 96 ಕೊರೊನಾ ಸೋಂಕು ದೃಢ
ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 96 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ.
ರಾಜ್ಯ ಆರೋಗ್ಯ ಇಲಾಖೆ ಶನಿವಾರ ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1868ಕ್ಕೆ ಇಳಿಕೆಯಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ.0.54ಕ್ಕೆ ಇಳಿಕೆಯಾಗಿದೆ.