ಚಾಕ್ಲೇಟ್ ಅಂತಾ ಪ್ಯಾಂಟ್ ಬಟನ್ ನುಂಗಿದ್ದ 2 ತಿಂಗಳ ಮಗು!?

ಬುಧವಾರ, 16 ಆಗಸ್ಟ್ 2023 (13:28 IST)
ಕಾರವಾರ : ಅಕ್ಕ ಚಾಕ್ಲೇಟ್ ಎಂದು ಕೊಟ್ಟ ಪ್ಯಾಂಟ್ ಬಟನ್ ನುಂಗಿದ್ದ 2 ತಿಂಗಳ ಮಗು ಪ್ರಾಣಾಪಾಯದಿಂದ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆ ಭಟ್ಕಳ ನಗರದ ರಂಗೀಕಟ್ಟೆ ನಿವಾಸಿ ಪಾಲಿಷ್ ಕಮಲ ಕಿಶೋರ ಪುತ್ರಿ ಅಮೃತ (2 ತಿಂಗಳು) ಬಟನ್ ನುಂಗಿದ್ದ ಹಸುಳೆ. 2 ವರ್ಷದ ನರ್ಮತಾ ಆಟವಾಡುತ್ತಾ ಚಾಕ್ಲೇಟ್ ಎಂದು ಪ್ಯಾಂಟ್ ಬಟನ್ ಅನ್ನು ಅಮೃತಾಳಿಗೆ ಕೊಟ್ಟಿದ್ದಾಳೆ. ಅಂತೆಯೇ ಏನೂ ಅರಿಯದ ಮುಗ್ಧ ಕಂದಮ್ಮ ಅದನ್ನು ನುಂಗಿದೆ. ಪರಿಣಾಮ ಮಗುವಿಗೆ ಉಸಿರಾಡಲು ಕಷ್ಟವಾಯಿತು.

ಇತ್ತ ಉಸಿರಾಡಲು ಒದ್ದಾಡುತ್ತಿದ್ದ ಮಗುವನ್ನು ಪೋಷಕರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರ ಯಶಸ್ವಿ ಚಿಕಿತ್ಸೆಯಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ