ನಕಲಿ ಪ್ಲೇಟ್ ಬಳಸಿ ಸಂಚರಿಸುತ್ತಿದ್ದ ಬಸ್ ವಶಕ್ಕೆ
ರಾಮನಗರ RTO ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಒಂದೇ ನಂಬರ್ನ ಎರಡು ಬಸ್ಗಳನ್ನ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಹಲವು ವರ್ಷಗಳಿಂದ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒಂದೇ ನಂಬರ್ ಪ್ಲೇಟ್ ಬಳಸಿ ಸಂಚಾರ ಮಾಡಲಾಗುತ್ತಿತ್ತು. KA-06-B 5766 ನಂಬರ್ನ ಅಡಿಯಲ್ಲಿ ಸಂಚರಿಸುತ್ತಿದ್ದ ಎರಡು ಖಾಸಗಿ ಬಸ್ಗಳನ್ನ ರಾಮನಗರ RTO ಅಧಿಕಾರಿ ಶಿವಕುಮಾರ್ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಗಿದೆ. ಟ್ಯಾಕ್ಸ್ ಹಾಗೂ ಪರ್ಮೀಟ್ ಹಣ ತಪ್ಪಿಸಲು ಬಸ್ ಮಾಲೀಕ ಈ ರೀತಿ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಎರಡು ಬಸ್ಗಳನ್ನ ಸೀಜ್ ಮಾಡಿದ್ದಾರೆ.