ಹಿಮದ ರಾಶಿ ನೋಡಿ ಕುಣಿದಾಡಿದ ಒಂಟೆ

ಶನಿವಾರ, 17 ಡಿಸೆಂಬರ್ 2022 (18:36 IST)
ಪ್ರಾಣಿ ಪಕ್ಷಿಗಳು ಮೋಜು ಮಾಡುವ, ಪರಸ್ಪರ ಆಟವಾಡುವ ಸಾಕಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಕಡೆ ಮೊದಲ ಬಾರಿ ಹಿಮವನ್ನು ಕಂಡ ಒಂಟೆಯೊಂದು ಖುಷಿಯಿಂದ ಕುಣಿದಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಒಂಟೆಗಳು ಮರುಭೂಮಿಯಲ್ಲಿ ವಾಸ ಮಾಡುತ್ತವೆ. ಸದಾ ಬಿಸಿಲಿನಿಂದ ಬಿಸಿಯಾಗಿರುವ ಮರುಭೂಮಿಯಲ್ಲಿ ಹಿಮ ಬೀಳುವುದು ತೀರಾ ವಿರಳ. ಹೀಗಾಗಿ ಒಂಟೆಗಳು ಹಿಮಪಾತವನ್ನು ನೋಡಿರುವುದು ಕೂಡ ವಿರಳವೇ ಇರಬಹುದು. ಹಾಗೆಯೇ ಈ ಒಂಟೆಯೂ ಕೂಡ ತನ್ನ ಜೀವನದಲ್ಲೇ ಮೊದಲ ಬಾರಿಗೆ ಹಿಮ ನೋಡಿದ್ದು ಕುಣಿದು ಕುಪ್ಪಳಿಸಿದೆ. ಅನೇಕರು ಕುಣಿದಾಡುವ ಒಂಟೆಯನ್ನ ನೋಡಿ ಖುಷಿ ಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ