ಗಾಳಿಪಟದೊಂದಿಗೆ ಮೇಲಕ್ಕೆ ಹಾರಿದ ಮಗು!

ಬುಧವಾರ, 18 ಜನವರಿ 2023 (18:18 IST)
ದೈತ್ಯ ಗಾಳಿಪಟದ ತಂತಿಗಳಲ್ಲಿ ಸಿಕ್ಕಿಹಾಕಿಕೊಂಡ ಮೂರು ವರ್ಷದ ಬಾಲಕಿ ಗಾಳಿಪಟದೊಂದಿಗೆ ಗಾಳಿಯಲ್ಲಿ ಹಾರಾಡಿದ ಘಟನೆ ತೈವಾನ್ ಹಬ್ಬದ ಸಮಯದಲ್ಲಿ ನಡೆದಿದೆ. ಇದ್ದಕ್ಕಿದ್ದಂತೆ ಗಾಳಿಪಟದೊಂದಿಗೆ ಮೇಲಕ್ಕೆ ಹಾರಿದ ಮಗುವನ್ನು ಕಂಡು ಉತ್ಸವದಲ್ಲಿ ಪಾಲ್ಗೊಂಡ ಜನರು ಭಯಭೀತರಾದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆ ನಡೆದಾಗ ಬಾಲಕಿ ಕಡಲತೀರದ ಪಟ್ಟಣವಾದ ನನ್ಲಿಯಾವೊದಲ್ಲಿ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದ್ದಳು. ಘಟನೆಯಲ್ಲಿ ಕೊನೆಗೂ ಬಾಲಕಿಯನ್ನ ರಕ್ಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ