ಮದ್ಯಪಾನ ಹೆಚ್ಚಾದರೆ ತನ್ನ ಸುತ್ತಾ ಏನು ನಡೆಯುತ್ತಿದೆ, ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವಿರುವುದಿಲ್ಲ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕುಡಿದ ಮತ್ತಲ್ಲಿ ರಸ್ತೆ ಮದ್ಯೆ ಹೋಗಿ ಕುಳಿತಿದ್ದಾನೆ. ವಾಹನಗಳು ಒಂದರ ಹಿಂದೆ ಒಂದು ಸಾಲು ಗಟ್ಟಿ ಬರುತ್ತಿವೆ. ಆದರೆ ಇದನ್ನೆಲ್ಲಾ ಲೆಕ್ಕಕ್ಕೆ ತೆಗೆದುಕೊಳ್ಳದೆ ರಂಪಾಟ ಮಾಡಿದ್ದಾನೆ. ನಡು ರಸ್ತೆಯಲ್ಲಿ ಕುಳಿತ ವ್ಯಕ್ತಿ ಅಲ್ಲೆ ಉಪಹಾರವನ್ನೂ ಸೇವಿಸಿದ್ದಾನೆ. 60 ಫೀಟ್ ರೋಡ್ಶಿ ವನಗರದಲ್ಲಿ ಈ ಘಟನೆ ಸಂಭವಿಸಿದೆ. ಯಾರಿಗೂ ಕೇರ್ ಮಾಡದೆ ಮಧ್ಯರಸ್ತೆಯಲ್ಲಿ ಕುಳಿತು ತಿಂಡಿ ತಿಂದಿದ್ದಾನೆ. ವ್ಯಕ್ತಿಯ ರಂಪಾಟ ವಾಹನ ಸವಾರರಿಗೆ ಕಿರಿಕಿರಿಯಾಗಿದೆ. ಬರುವ ವಾಹನಗಳಿಗೆಲ್ಲ ಸೈಡ್ನಲ್ಲಿ ಹೋಗಿ ಎಂದಿದ್ದಾನೆ.