7 ವರ್ಷ ವರ್ಷದ ಬಾಲಕಿಯ ಮೇಲೆ ತಂದೆಯ ಸ್ನೇಹಿತನಿಂದ ಅತ್ಯಾಚಾರ

ಶನಿವಾರ, 2 ನವೆಂಬರ್ 2019 (13:23 IST)
ಧಾರವಾಡ : ಮನೆಯಲ್ಲಿ ಒಬ್ಬಳೆ ಇದ್ದ 7 ವರ್ಷ ವರ್ಷದ ಬಾಲಕಿಯ ಮೇಲೆ ತಂದೆಯ ಸ್ನೇಹಿತ ಅತ್ಯಾಚಾರ ಎಸಗಿದ ಘಟನೆ ಧಾರವಾಡ ಅಣ್ಣಗೇರಿ ಪಟ್ಟಣದಲ್ಲಿ ನಡೆದಿದೆ.


ಮುತ್ತಪ್ಪ(27) ಅತ್ಯಾಚಾರ ಎಸಗಿದ ಆರೋಪಿ. ಸಂತ್ರಸ್ತ ಬಾಲಕಿಯ ತಂದೆಗೆ ಪರಿಚಯದವನಾದ ಈತ ತಂದೆಯನ್ನು ಕೇಳುವ ನೆಪದಲ್ಲಿ ಮನೆಗೆ ಬಂದಾಗ ಬಾಲಕಿ ಒಬ್ಬಳೇ ಇರುವುದನ್ನು ಕಂಡು ಆಕೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಬಾಲಕಿಯ ತಂದೆ ಧಾರವಾಡ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಪೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿ ಮುತ್ತಪ್ಪನನ್ನು ಬಂಧಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ