ಚೆನ್ನೈ : ನಾಯಿ ಸಾಕಬೇಡ ಎಂದಿದ್ದಕ್ಕೆ ಬೇಸರಗೊಂಡ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಕವಿತಾ (24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ನಾಯಿಯೊಂದನ್ನು ಸಾಕುತ್ತಿದ್ದಳು. ಆದರೆ ಈ ನಾಯಿ ಯಾವಾಗಲೂ ಬೊಗಳುತ್ತಿದ್ದರಿಂದ ಅಕ್ಕಪಕ್ಕದ ಮನೆಯವರು ಕಿರಿಕಿರಿ ಮಾಡುತ್ತಿದ್ದರು, ಆದ್ದರಿಂದ ಇನ್ನುಂದೆ ನಾಯಿ ಸಾಕಬೇಡ, ಈ ನಾಯಿಯನ್ನು ಮನೆಯಿಂದ ಓಡಿಸು ಎಂದು ತಂದೆ ಗದರಿದ್ದಾರೆ.
ಇದರಿಂದ ಬೇರಸಗೊಂಡ ಕವಿತಾ ನಾಯಿಯನ್ನು ಬಿಟ್ಟಿರಲಾಗದೆ ಗುರುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮನೆಗೆ ಬಂದು ಪರಿಶೀಲಿಸಿದಾಗ ಕವಿತಾ ಬರೆದ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ನಾಯಿಯನ್ನು ನೆಮ್ಮದಿಯಿಂದ ಬದುಕಲು ಬಿಡಿ, ಅದನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬರೆದಿದ್ದಾಳೆ ಎನ್ನಲಾಗಿದೆ.