ನೇಹಾ ಹಿರೇಮಠ್‌ ಮಾದರಿಯಲ್ಲೇ ರಾಯಚೂರಿನಲ್ಲಿ ವಿದ್ಯಾರ್ಥಿನಿಯ ಹತ್ಯೆ

Sampriya

ಗುರುವಾರ, 30 ಜನವರಿ 2025 (18:29 IST)
ಸಿಂಧನೂರು: ರಾಯಚೂರು ಜಿಲ್ಲೆಯ ನಗರದ ಹೊರವಲಯದ ಗೌತಮ ಲೇಜೌಟ್‌ ಬಳಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಎಸ್‌ಸಿ ಪ್ರಥಮ ಸೆಮಿಸ್ಟರ್‌ನ ವಿದ್ಯಾರ್ಥಿನಿಯನ್ನು ಕತ್ತು ಸೀಳಿ ಕೊಯ್ದು ಕೊಲೆ ಮಾಡಿರುವ ಘಟನೆ ನಡೆದಿದೆ.

ಕೊಲೆಯಾದ ವಿದ್ಯಾರ್ಥಿನಿಯನ್ನು ಲಿಂಗಸುಗೂರು ಪಟ್ಟಣದ ಶಿಫಾ  ಅಬ್ದುಲ್ ವಾಹೀದ್ (24) ಎಂದು ಗುರುತಿಸಲಾಗಿದೆ. ಲಿಂಗಸುಗೂರು ಮೂಲದ  ಟೈಲ್ಸ್ ಅಳವಡಿಸುವ ಕೆಲಸ ಮಾಡುತ್ತಿದ್ದ ಕಾರ್ಮಿಕ  ಮುಬಿನ್‌ ಎಂಬಾತ ಕೊಲೆ ಆರೋಪಿ.

ಶಿಫಾ ಇಂದು ಬೆಳಿಗ್ಗೆ 9 ಗಂಟೆಗೆ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಲಿಂಗಸುಗೂರಿನಿಂದ ಸಿಂಧನೂರಿಗೆ ಕಾಲೇಜಿಗೆ ಬಂದಿದ್ದಳು. ಆರೋಪಿ ಬೈಕ್‌ ಮೇಲೆ ಶಿಫಾಳನ್ನು ಹಿಂಬಾಲಿಸಿಕೊಂಡು ಬಂದಿದ್ದ.

ಆರೋಪಿಯು ಮಹತ್ವದ ವಿಚಾರ ಮಾತನಾಡಲು ಇದೆ ಎಂದು ಹೇಳಿ ಶಿಫಾಳನ್ನು  ಕಾಲೇಜು ಹತ್ತಿರದ ಗೌತಮ ಲೇಔಟ್‌ಗೆ ಹೋಗಿದ್ದಾನೆ. ಇಬ್ಬರ ನಡೆಯುವೆಯೂ ಮಾತುಕತೆ ನಡೆದ ನಂತರ ಕುಪಿತಗೊಂಡ ಯುವಕ ತನ್ನೊಂದಿಗೆ ತಂದಿದ್ದ ಚಾಕುವಿನಿಂದ ಯುವತಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಲಿಂಗಸುಗೂರು ಠಾಣೆಗೆ ತೆರಳಿ ಶರಣಾಗಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ