ಕ್ರಿಸ್ ಮಸ್ ಅಂದ್ರೆ ಥಟ್ ಅಂತಾ ನೆನಪಾಗೋದು ಬಗೆ ಬಗೆಯ ಕೇಕ್ ಗಳು.ಡಿಫರೆಂಟ್ ಡಿಫರೆಂಟ್ ಕೇಕ್ ಗಳ ಜೊತೆ ಕ್ರಿಸ್ ಮಸ್ ಕಲರ್ ಫುಲ್ ಆಗುತ್ತೆ.ಆದ್ರೆ ಈ ಬಾರಿ ಕ್ರಿಸ್ಮಸ್ಗೆ ಕೇಕ್ಗಳು ಬಣ್ಣ ಬಣ್ಣದ ವಿವಿಧ ಆಕೃತಿಗಳನ್ನ ತಳೆದಿದ್ದು, ನೋಡುಗರನ್ನ ತನ್ನತ್ತ ಆಕರ್ಷಿಸುತ್ತಿದೆ.ನಾಳೆಯಿಂದ ಜನವರಿ 2ರವರೆಗೆ ಈ ಕೇಕ್ ಶೋ ನಡೆಯಲಿದ್ದು, ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಕಲಾಪ್ರಪಂಚ ಅಲ್ಲಿ ಸಿದ್ಧವಾಗಿ ನಿಂತಿದೆ.
ಇನ್ನು ಈ ಕೇಕ್ ಶೋನಲ್ಲಿ ವಿವಿಧ ಥೀಮ್ಗಳನ್ನ ಇಟ್ಟುಕೊಂಡು ಹಲವು ಬಗೆಯ ಕಲಾಕೃತಿಗಳನ್ನ ಚಿತ್ರಿಸಲಾಗಿದೆ. ಸಕ್ಕರೆ ಮೂಲಕ ನಿರ್ಮಿಸಲಾಗಿರೋ ಕ್ಯಾಥೆಡ್ರಲ್ ಚರ್ಚ್ ಮಾದರಿಯಂದ ಹಿಡಿದು, ಇತ್ತೀಚಿಗೆ ನಿಧನವಾದ ಮೈಸೂರಿನ ದಸರಾ ಆನೆ ಗೋಪಾಲಸ್ವಾಮಿಯವರೆಗೆ ಎಲ್ಲವನ್ನೂ ಕೇಕ್ನಲ್ಲಿ ಅರಳಿಸಲಾಗಿದೆ. ಅಶೋಕ ಸ್ತಂಭ, ಶ್ರೀರಾಮ ಹಾಗೂ ರಾಮನ ಭಂಟ ಹನುಮ ಕೂಡ ಕೇಕ್ನಲ್ಲಿ ರೂಪತಾಳಿದ್ದಾರೆ.