ಗೃಹ ಸಚಿವರ ಜೊತೆ ಪೊಲೀಸರ ಮೀಟಿಂಗ್ ಬೆನ್ನಲ್ಲೇ ಮತ್ತೊಂದು ಮಹತ್ವದ ಸಭೆ

ಶುಕ್ರವಾರ, 16 ಡಿಸೆಂಬರ್ 2022 (17:36 IST)
ಬೆಂಗಳೂರಿನ ಪಬ್ ಮತ್ತು ಕ್ಲಬ್ ಮಾಲೀಕರ ಜೊತೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಲಾಗಿದೆ.ಹೊಸವರ್ಷ ಆಚರಣೆಗೆ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಪಬ್ ಮತ್ತು ಕ್ಲಬ್ ಮಾಲೀಕರಿಗೆ ಕೆಲವೊಂದು ನಿಯಮಗಳನ್ನ ಪಾಲಿಸುವಂತೆ ತಾಕೀತು ಮಾಡಲಾಗಿದೆ.ಕ್ಲಬ್ ಮತ್ತು ಪಬ್ ಗಳ ಒಳಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.ಕ್ಲಬ್ ಮತ್ತು ಪಬ್ ಮಾಲೀಕರಿಂದ ತಮ್ಮ ಸಮಸ್ಯೆಗಳ ಬಗ್ಗೆ ಪೊಲೀಸರೊಂದಿಗೆ ಚರ್ಚೆ ನಡೆಸಲಾಗ್ತಿದ್ದು,ಸಭೆಯಲ್ಲಿ ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತ, ಸಿಸಿಬಿ ಆಯುಕ್ತರು ಎಲ್ಲಾ ಡಿಸಿಪಿಗಳು ಭಾಗಿಯಾಗಿದ್ದು,ಹೊಸ ವರ್ಷ ಹತ್ತಿರವಾಗುತ್ತಿರುವ ಬೆನ್ನಲ್ಲೇ ಸಭೆ ಹೆಚ್ಚು ಮಹತ್ವ ಪಡೆದಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ