ಬಾಳೆಹಣ್ಣು ತುಂಬಿದ ಲಾರಿ ಪಲ್ಟಿ

ಭಾನುವಾರ, 8 ಜನವರಿ 2023 (17:22 IST)
ಬಾಗಲಕೋಟೆಯಲ್ಲಿ ಬಾಳೆಹಣ್ಣು ತುಂಬಿದ ಲಾರಿ ಪಲ್ಟಿಯಾಗಿದೆ. ನಿಯಂತ್ರಣ ತಪ್ಪಿ ಲಾರಿ ರಸ್ತೆಯ ಪಕ್ಕಕ್ಕೆ ಉರುಳಿ ಬಿದ್ದಿದೆ. ಇದರಿಂದಾಗಿ ಬಾಳೆಹಣ್ಣಿನ ಬಾಕ್ಸ್​​ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಕೂಡಲ ಸಂಗಮ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಹುನಗುಂದ್ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ. ಲಾರಿ ಚಾಲಕನ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಹೊಸಪೇಟೆಯಿಂದ ವಿಜಯಪುರ ಕಡೆಗೆ ಈ ಲಾರಿ ಹೊರಟಿತ್ತು. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ