ಕರ್ನಾಟಕ ಚಿತ್ರಕಲಾ ಪರಿಷತ್ ನಿಂದ ಆಯೋಜನೆ ಮಾಡಿರುವ 20ನೇ ಚಿತ್ರಸಂತೆಗೆ ಪೇಟಿಂಗ್ ಮೇಲೆ
ಸಹಿ ಮಾಡುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ರು.
ಶಿವಾನಂದ ಸರ್ಕಲ್ ಬಳಿ ಇರುವ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಚಿತ್ರಸಂತೆ ನಡೆಯುತ್ತಿದ್ದು,ಇದೆ ವೇಳೆ ಚಿತ್ರಸಂತೆಯಲ್ಲಿ ಸಚಿವ ಅಶ್ವತ್ಥ್ ನಾರಾಯಣ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್ ಶಂಕರ್, ಸಂಸದ ಪಿ.ಸಿ ಮೋಹನ್, ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.ಚಿತ್ರಸಂತೆಯಲ್ಲಿ ನವೀಲು ಚಿತ್ರ ಬಿಡಿಸುವ ಮೂಲಕ ಚಿತ್ರ ಸಂತೆ ಸಿಎಂ ಉದ್ಘಾಟಿಸಿದ್ದು,ಸಿಎಂ ಚಿತ್ರ ಬಿಡಿಸದಕ್ಕೆ ಪ್ರೇಕ್ಷಕರು ಚಪ್ಪಳೆ ಹೊಡೆದ್ರು.ಸಿಎಂಗೆ ರಾಣೆಬೆನ್ನೂರು ಕಲಾವಿದರಿಂದ ಸಿಎಂ ಬೊಮ್ಮಾಯಿ ಹಾಗೂ ಪ್ರಧಾನಿ ಮೋದಿ ಭಾವಚಿತ್ರ ಗಿಫ್ಟ್ ನೀಡಿದ್ರು.
ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ ಚಿತ್ರಕಲೆ ಮನಸ್ಸಿನ ಭಾವನೆಗಳನ್ನ ವ್ಯಕ್ತಪಡಿಸುವ ಒಂದು ಮಾಧ್ಯಮ.ಮನದಾಳದ ಮಾತುಗಳು ಮತ್ತು ಭಾವನೆಗಳನ್ನ ಚಿತ್ರಕಲೆ ಮೂಲಕ ವ್ಯಕ್ತಪಡಿಸಲಾಗುತ್ತೆ.ಚಿತ್ರಕಲೆ ತಿಳಿದುಕೊಳ್ಳುವ ಪ್ರಯತ್ನ ಸಾರ್ವಜನಿಕರು ಮಾಡಬೇಕು.ಚಿತ್ರಕಲಾ ಪರಿಷತ್ತು ಕೆಲಸ ಒಳ್ಳೆಯ ಕಲಾವಿದರಿಗೆ ಅವಕಾಶ ಮಾಡಿಕೊಡಬೇಕು ಹಾಗೂ ಸಾಮಾನ್ಯ ಜನರಲ್ಲಿ ಚಿತ್ರಕಲೆ ಅಭಿಪ್ರಾಯ ಮೂಡಿಸೋದು.ಚಿತ್ರಕಲಾ ಪರಿಷತ್ತ ವಿಶ್ವದಲ್ಲೇ ಮೊತ್ತೊಂದು ಇಲ್ಲ.ಚಿತ್ರಕಲಾ ಪರಿಷತ್ತ್ ಒಳ್ಳೆಯ ಕೆಲಸ ಮಾಡ್ತಿದೆ.ಚಿತ್ರಸಂತೆ ಆಗಲೇ ಬೇಕಾಗಿರುವ ಸಂತೆ ಎಂದು ಹೇಳಿದ್ರು.
ಅಲ್ಲದೇ ಇದು ಬೆಳೆಯಬೇಕು ಇಲ್ಲಿ ಡಿಗ್ರಿ ಆದತಕ್ಷಣ ನೌಕರಿ ತಗೆದುಕೊಳ್ಳೊದಿಲ್ಲ.ನಮ್ಮ ಸಂಸ್ಕೃತಿಯನ್ನ ಪ್ರತಿಬಿಂಬಿಸುವ ಸಂಸ್ಥೆ.ಇದು ಸರಸ್ವತಿ ವಾಹನ ಪರಮಹಂಸ.ಈ ಸಂಸ್ಥೆ ಹಿಮಾಲಯದ ಎತ್ತರಕ್ಕೆ ಬೆಳಯಬೇಕು.ಉತ್ತರ ಕರ್ನಾಟಕ , ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ.ಈ ವರ್ಷ ನಾಲ್ಕೈದು ಭಾಗಗಳಲ್ಲಿ ಚಿತ್ರ ಸಂತೆ ಮಾಡಬೇಕು ಎಂದು ಸಿಎಂ ಸಲಹೆ ನೀಡಿದ್ರು.ಇದಕ್ಕೆ ಸರ್ಕಾರ ಎಲ್ಲಾ ನೆರವು ನೀಡಲಿದೆ.ಈ ಚಿತ್ರಸಂತೆಯನ್ನ ರಾಷ್ಟ್ರೀಯ ಮಟ್ಟಕ್ಕೆ ತಗೆದುಕೊಂಡು ಹೋಗಬೇಕು.ಬ್ಯಾಂಡ್ ಬೆಂಗಳೂರನ್ನ ರಾಷ್ಟ್ರೀಯ ಮಟ್ಟಕ್ಕೆ ತಗೆದುಕೊಂಡುವದ್ರಲ್ಲಿ ಚಿತ್ರಕಲಾ ಪರಿಷತ್ತ್ ಗೆ ತಗೆದುಕೊಂಡು ಹೋಗಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ರು.