ಮಕ್ಕಳಿಗೆ ವಿಷ ಹಾಕಿದ ತಂದೆ

ಗುರುವಾರ, 1 ಜುಲೈ 2021 (15:42 IST)
ಮಕ್ಕಳ ಕಿರುಕುಳ ತಾಳದೆ ತಂದೆಯೊಬ್ಬ ತನ್ನ ಮಕ್ಕಳಿಗೆ ವಿಷ ಹಾಕಿದ ಹೇಯ ಘಟನೆ ಮುಂಬೈನಲ್ಲಿ ವರದಿಯಾಗಿದೆ.
ಆಹಾರದಲ್ಲಿ ವಿಷ ಬೆರಸಿ ಮಕ್ಕಳಿಗೆ ಉಣಿಸಿದ ತಂದೆಯ ಘೋರ ಕೃತ್ಯಕ್ಕೆ ಒಂದು ಮಗು ಬಲಿಯಾಗಿದ್ದು ಎರಡು ಮಕ್ಕಳು ಆಸ್ಪತ್ರೆಗೆ ದಾಖಲಾಗಿವೆ. ತಂದೆಯ ಹೀನ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಘಟನೆಯಲ್ಲಿ ಇಬ್ಬರು ಮಕ್ಕಳ ಆರೋಗ್ಯ ಸ್ಥಿರವಾಗಿದ್ದು ಚೇತರಿಕೆ ಕಾಣುವ ಲಕ್ಷಣಗಳಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ