ಬಿಎಂಟಿಸಿಗೆ ಹೊಸ ತಲೆ ನೋವು ಶುರು

ಸೋಮವಾರ, 9 ಜನವರಿ 2023 (18:15 IST)
ಚಾಲಕರ ಕೊರತೆ ನೀಗಿಸಲು ಖಾಸಗಿ ಏಜೆನ್ಸಿಗಳ ಬಿಎಂಟಿಸಿ ಮೊರೆಹೋಗಿದೆ.ಬಿಎಂಟಿಸಿಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಬಸ್ ಸಂಚಾರಕ್ಕೆ ತೊಂದರೆಯಾಗಿದ್ದು,ಚಾಲಕರನ್ನ ಒದಗಿಸಲು ಖಾಸಗಿ ಏಜೆನ್ಸಿಗಳಿಗೆ ಟೆಂಡರ್ ಆಹ್ವಾನಕ್ಕೆ ಅಸ್ತು ಅಂದಿದ್ದಾರೆ.ಬಿಎಂಟಿಸಿ ನಿರ್ಧಾರಕ್ಕೆ ಸಾರಿಗೆ ಇಲಾಖೆ ನೌಕರರಲ್ಲಿ  ಟೆನ್ಷನ್ ಶುರುವಾಗಿದೆ.
 
ಬರೋಬ್ಬರಿ ಒಂದು ಸಾವಿರ ಚಾಲಕರನ್ನ ಒದಗಿಸಲು ಎಜೆನ್ಸಿಗಳಿಗೆ ಟೆಂಡರ್ ಕರೆದಿದ್ದಾರೆ.ಆಯ್ಕೆ ಮಾಡಿದ ಏಜೆನ್ಸಿಯು ಪ್ರತಿ ಬಿಎಂಟಿಸಿ ವಲಯಕ್ಕೆ 200 ಚಾಲಕರನ್ನ ನೇಮಕಮಾಡಲಾಗಿದೆ.ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ. ವಲಯಗಳು 10 ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ವರಿಗೆ ಆದ್ಯತೆ ನೀಡಲಾಗುತ್ತದೆ.ಕರ್ನಾಟಕದಲ್ಲಿ ಮಾನ್ಯ ಬ್ಯಾಡ್ಜ್ನೊಂದಿಗೆ ಎರಡು ವರ್ಷಗಳ HPV/HTV ಪರವಾನಗಿಯನ್ನು ಹೊಂದಿರಬೇಕು.ವ್ಯಕ್ತಿಯ ವಯಸ್ಸು 50 ವರ್ಷಕ್ಕಿಂತ ಹೆಚ್ಚಿರಬಾರದು.ವರ್ಕ್ ಆರ್ಡರ್ ನೀಡಿದ ನಂತರ ಏಜೆನ್ಸಿ 15 ದಿನಗಳಲ್ಲಿ ಚಾಲಕರನ್ನು ಪೂರೈಸಬೇಕು.ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ಚಾಲಕರಿಗೆ 11 ತಿಂಗಳಿಗೆ ಮಾತ್ರ ಕಾಲಾವಕಾಶ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ