ಮೂರು ದಿನ ಶೌಚಾಲಯದಲ್ಲಿ ಸಿಲುಕಿದ ವ್ಯಕ್ತಿ ರಕ್ಷಣೆ
ತುಂಗಾ ನದಿ ಪ್ರವಾಹಕ್ಕೆ 3 ದಿನಗಳ ಕಾಲ ಶೌಚಾಲಯದಲ್ಲಿ ಸಿಲುಕಿದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಈ ಘಟನೆ ನಡೆದಿದೆ.
ಕಾರ್ಮಿಕ ವಿನೋದ್ ಮಂಡ್ಲೆ ಶೌಚಾಲಯದಲ್ಲಿ ಮೂರು ದಿನಗಳನ್ನು ಕಳೆದ ವ್ಯಕ್ತಿಯಾಗಿದ್ದಾನೆ. ಶೃಂಗೇರಿಯ ಗಾಂಧಿ ಮೈದಾನದಲ್ಲಿರುವ ಶೌಚಾಲಯಕ್ಕೆ ಕಳೆದ ಮೂರು ದಿನಗಳ ಹಿಂದೆ ಹೋಗಿ ಸಿಲುಕಿದ್ದ ವಿನೋದ್ ನನ್ನು ರಕ್ಷಣೆ ಮಾಡಲಾಗಿದೆ.
ತುಂಗಾ ನದಿ ಪ್ರವಾಹದಿಂದ ಮೂರು ದಿನ ಶೌಚಾಲಯದಲ್ಲಿಯೇ ಸಿಲುಕಿದ ವಿನೋದ್ ಮಂಡ್ಲೆ ನನ್ನು ಎ ಎನ್ ಎಫ್ ಮತ್ತು ಅಗ್ನಿ ಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಈತ ಬಿಹಾರ ಮೂಲದ ಕಾರ್ಮಿಕನಾಗಿದ್ದಾನೆ.