ಸುರೇಶ್ ಅಲಿಯಾಸ್ ನಾಗರಾಜ್ ಬಂಧಿತ ಆರೋಪಿ.
ಮೈಸೂರಿನ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕನಾಗಿದ್ದ ಸುರೇಶ್ ಮೈಸೂರಿನ ಡಿಟಿಪಿ ಸೆಂಟರ್ ಒಂದರಲ್ಲಿ ಟೈಪಿಸ್ಟ್ ಕೆಲಸ ಮಾಡುತ್ತಿದ್ದ ಯುವತಿಗೆ ಶಿಕ್ಷಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿ ಕೆಲಸ ಕೊಡಿಸುತ್ತೇನೆಂದು ಹೇಳಿ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಟಿಪಿ ಸೆಂಟರ್ಗೆ ಲೆಟರ್ ಒಂದನ್ನು ಟೈಪ್ ಮಾಡಿಸಲು ತೆರಳಿದ್ದ ಆರೋಪಿ ಸುರೇಶ್ಗೆ, ತನಗೆ ಎಲ್ಲಾದರೂ ಒಂದು ಒಳ್ಳೆಯ ಕೆಲಸ ಇದ್ದರೆ ಹೇಳಿ ಸರ್ ಎಂದು ಯುವತಿ ಮನವಿ ಮಾಡಿದ್ದಳು. ಬಳಿಕ ಎಲ್ಲಾದರೂ ಯಾಕೆ ಸರ್ಕಾರಿ ಕೆಲಸ ಕೊಡಿಸೋಣ ಎಂದು ಸುರೇಶ್ ಹೇಳಿದ್ದ. ನಂತರ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕಿ ಕೆಲಸ ಇದೆ ಎಂದು ಸುಳ್ಳು ಹೇಳಿದ್ದ.ಕೆಲಸ ಕೊಡಿಸಲು ಆರು ಲಕ್ಷ ರೂ. ಹಣ ಬೇಕು ಎಂದು ಯುವತಿಗೆ ಹೇಳಿ ಬಳಿಕ ಬೇರೊಂದು ಡಿಟಿಪಿ ಸೆಂಟರ್ನಲ್ಲಿ ಸರ್ಕಾರದ ಲೆಟರ್ ಬಳಸಿ ಯುವತಿಗೆ ಮಹಾರಾಣಿ ಕಾಲೇಜಿನಲ್ಲಿ ಎಫ್‌ಡಿಎ ಎಂದು ನಮೂದಿಸಿರುವ ಆಫರ್ ಲೆಟರ್ ಕೊಟ್ಟಿದ್ದ. ಆಫರ್ ಲೆಟರ್ ಸಹಿತ ಎಂ.ಎಸ್ ಬಿಲ್ಡಿಂಗ್ನ ಶಿಕ್ಷಣ ಇಲಾಖೆಗೆ ದಾಖಲೆ ಪರಿಶೀಲನೆಗೆ ಯುವತಿ ತೆರಳಿದಾಗ ಸತ್ಯ ಬಯಲಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.