Mangalore: ಇದು ಹೊಳೆ ಅಲ್ಲ ಪಂಪ್ ವೆಲ್ ಮಾರಾಯ್ರೆ.. ವೈರಲ್ ವಿಡಿಯೋ ನೋಡಿ

Sampriya

ಸೋಮವಾರ, 26 ಮೇ 2025 (19:50 IST)
Photo Credit X
ಮಂಗಳೂರು: ಮೊದಲ ಮುಂಗಾರು ಮಳೆಗೆಯೇ ದಕ್ಷಿಣ ಕನ್ನಡ ಜಿಲ್ಲೆ ಜನತೆಗೆ ಸುಸ್ತಾಗಿದ್ದಾರೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಮಂಗಳೂರಿನ ಹಲವೆಡೆ ಜಲಾವೃತವಾಗಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಪಂಪ್‌ವೆಲ್‌ ಫ್ಲೈ ಓವರ್‌ ಕೆಳಭಾಗದಲ್ಲಿ ಪ್ರವಾಹ ಸ್ಥಿತಿಯ ವಿಡಿಯೋವೊಂದು ವೈರಲ್ ಆಗಿದೆ.

ಪ್ರತಿ ವರ್ಷದ ಮಳೆಯ ಸಂದರ್ಭದಲ್ಲೂ ಪಂಪ್‌ವೆಲ್‌ ಫ್ಲೈ ಓವರ್‌ನ ಕೆಳಗೆ ಪ್ರವಾಹ ಸ್ಥಿತಿ ಎದುರಾಗುತ್ತದೆ. ಈ ಭಾರಿಯೂ ಅದೇ ಪರಿಸ್ಥಿತಿ ಎದುರಾಗಿದೆ.  ನಿರಂತರ ಸುರಿದ ಮಳೆಗೆ ಫ್ಲೈ ಓವರ್‌ಬ ಕೆಳಭಾಗ ಸಂಪೂರ್ಣ ಜಲಾವೃತವಾಗಿದೆ.

ರೋಡ್‌ನಲ್ಲಿ ನೀರು ತುಂಬಿದ್ದರಿಂದ ಸವಾರರು ವಾಹನ ಚಲಾಯಿಸಲು ಹರಸಾಹಸ ಪಟ್ಟರು.

#KarnatakaRains #Mangalore pic.twitter.com/XPR6gBgZXz

— Webdunia Kannada (@WebduniaKannada) May 26, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ