ಬೆಂಗಳೂರು :ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ಕಳ್ಳತನಕ್ಕಿಳಿದು ಪೊಲೀಸರ ಅತಿಥಿಯಾಗಿರುವ ಘಟನೆ ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿಸಿಟಿವಿ ಇಲ್ಲದ 11 ಮನೆಗಳನ್ನು ಆರಿಸಿ ಕಳವು ಮಾಡಿದ್ದ ಸುನಿಲ್ ಬಂಧಿತ ಆರೋಪಿ.ಸಿಸಿಟಿವಿ ಇಲ್ಲದ ಮನೆಗಳನ್ನೇ ಆರಿಸಿಕೊಂಡು ಕಳವು ಮಾಡಿದ್ದ ಸುನಿಲ್ ಈ ಹಿಂದೆ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ ಈತನ ಯಾವುದೇ ರೆಕಾರ್ಡ್ ಪೊಲೀಸರ ಬಳಿಯಿರಲಿಲ್ಲ. ಇದರಿಂದ ನಾಲ್ಕು ವರ್ಷಗಳಿಂದ ಕಳವು ವೃತ್ತಿ ನಡೆಸುತ್ತಿದ್ದರೂ ಈತನ ಪತ್ತೆಯಾಗಿರಲಿಲ್ಲ.