ಮೀಸಲಾತಿ ಪಡೆದ ಜಾತಿಯನ್ನ ಮೀಸಲಾತಿಯಿಂದ ಹೊರಗಿಡಬೇಕು- ಸುಪ್ರೀಂಕೋರ್ಟ್

geetha

ಬುಧವಾರ, 7 ಫೆಬ್ರವರಿ 2024 (20:00 IST)
ನವದೆಹಲಿ-ಶಿಕ್ಷಣ ಸಂಸ್ಥೆಗಳ ಪ್ರವೇಶ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಡುವೆ ಉಪ ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆಯೇ ಎಂಬ ಕಾನೂನು ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ನ ಏಳು ನ್ಯಾಯಾಧೀಶರ ಸಂವಿಧಾನ ಪೀಠ ಮಂಗಳವಾರ ಪರಿಶೀಲಿಸಲು ಪ್ರಾರಂಭಿಸಿದೆ.
 
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ.ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಸಂವಿಧಾನ ಪೀಠವು ಮಂಗಳವಾರ ಎಸ್ಸಿ / ಎಸ್ಟಿ ಮೀಸಲಾತಿಯೊಳಗೆ ಉಪ ವರ್ಗೀಕರಣದ ಅನುಮತಿಯ ಬಗ್ಗೆ ವಿಚಾರಣೆಯನ್ನು ಪ್ರಾರಂಭಿಸಿತು.

ಮೀಸಲಾತಿಗೆ ಅರ್ಹರಾಗಿರುವ ಮತ್ತು ಅದರಿಂದ ಪ್ರಯೋಜನ ಪಡೆದ ಹಿಂದುಳಿದ ಜಾತಿಗಳು ಈಗ ಮೀಸಲಾತಿ ವರ್ಗದಿಂದ ಹೊರಬರಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಮೀಸಲಾತಿ ಸೌಲಭ್ಯ ಪಡೆದವರು ಹೆಚ್ಚು ಹಿಂದುಳಿದವರಿಗೆ ದಾರಿ ಮಾಡಿಕೊಡಬೇಕು ಎಂದು ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ