ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಶುರುವಾದ ರೌಡಿ ಟಾಕ್ ವಾರ್

ಭಾನುವಾರ, 4 ಡಿಸೆಂಬರ್ 2022 (18:36 IST)
ಸದ್ಯ ರಾಜಕೀಯ ವಲಯದಲ್ಲಿ ರೌಡಿ ವಾರ್ ಶುರುವಾಗಿದೆ. ಬಿಜೆಪಿ ಕಾಂಗ್ರೆಸ್ ನಲ್ಲಿ ಅವನು ರೌಡಿ ಇವನೂ ರೌಡಿ ಅನ್ನೋ ಟಾಕ್ ವಾರ್ ನಡುವೆ ಬಿಜೆಪಿ ಮಹಾ ಎಡವಟ್ಟೊಂದನ್ನ ಮಾಡಿಕೊಂಡಿದೆ.ಕಾಂಗ್ರೆಸ್ ನ ಜಯನಗರ ಕಾರ್ಯಕರ್ತ ಮತ್ತು ಬಿಬಿಎಂಪಿ ಟಿಕೆಟ್ ಆಕಾಂಕ್ಷಿಯಾಗಿರುವ ಚೇತನ್ ಫೋಟೋ ಹಾಕಿ ರೌಡಿ ಎಂಬಂತೆ  ಬಿಂಬಿಸಿದೆ. ಈ ಕುರಿತ ಪೋಟೋಗಳನ್ನ ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದು ,ಇದಕ್ಕೆ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಸ್ಟ್  ಡಿಲಿಡ್ ಮಾಡದಿದ್ರೆ ಕಾನೂನು ಹೋರಾಟ ನಡೆಸುವುದಾಗಿ ಟ್ವಿಟರ್ ನಲ್ಲೆ ಚೇತನ್ ಬಿಜೆಪಿ ಗೆ ಖಾರವಾಗಿ ಉತ್ತರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ