ಬಿಜೆಪಿ ರೌಡಿ ಮೋರ್ಚಾ ಹೆಸರಿನ ವೆಬ್ ಸೈಟ್ ಆರಂಭಿಸಿ ವ್ಯಂಗ್ಯ

ಭಾನುವಾರ, 4 ಡಿಸೆಂಬರ್ 2022 (18:27 IST)
ರಾಜಕೀಯ ವಲಯದಲ್ಲಿ ಇತ್ತೀಚೆಗೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ರೌಡಿಗಳು ಬಿಜೆಪಿ ಸೇರುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರೌಡಿ ಮೋರ್ಚಾ ಹೆಸರಿನ ವೆಬ್ ಸೈಟ್ ಆರಂಭವಾಗಿದೆ.ಅನಾಮಿಕರು ಈ ವೆಬ್ ಸೈಟ್ ಆರಂಭಿಸಿದ್ದು, ರೌಡಿಗಳಾದ ಸೈಲೆಂಟ್ ಸುನೀಲ್,  ವಿಲ್ಸನ್ ಗಾರ್ಡನ್ ನಾಗ, ಫೈಟರ್ ರವಿ ಹಾಗೂ ಬೆತ್ತನಗೆರೆ ಶಂಕರ ಸೇರಿದಂತೆ ಹಲವರ ಹೆಸರು ಬಿಜೆಪಿಯಿಂದ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣ ಆಭ್ಯರ್ಥಿಗಳು ಹಾಗೂ ಅವರ ಸಾಧನೆಗಳ ಬಗ್ಗೆ ನಮೂದಿಸಲಾಗಿದೆ.ಚುನಾವಣೆ ಹತ್ತಿರ ಬರುತ್ತಿದೆ , ಜನರು ನಮ್ಮಿಂದ ದೂರ ಹೋಗುತ್ತಿದ್ದಾರೆ , ಆಪರೇಷನ್ ಕಮಲ ಮಾಡಿದ್ರೂ ಗೆಲ್ಲುವುದು ಗ್ಯಾರಂಟಿ ಇಲ್ಲದ ಕಾರಣ 'ಬಿಜೆಪಿ ರೌಡಿ ಮೋರ್ಚಾ' ಸ್ಥಾಪಿಸುವುದಕ್ಕಾಗಿ ' ಆಪರೇಷನ್ ರೌಡಿ ಶೀಟರ್' ಪ್ರಾರಂಭಿಸಿದ್ದೇವೆ ಎಂದು ಪೋಸ್ಟ್ ಮಾಡಿ ವೆಬ್ ಸೈಟ್ ನಲ್ಲಿ  ಹರಿಬಿಡಲಾಗಿದೆ. ಈ ಬಗ್ಗೆ ಎಲ್ಲಿಯೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ