ಮೇಲ್ಛಾವಣಿ ಕುಸಿತ: ಬಯಲಲ್ಲಿ ಸಾಗಿದೆ ಪಾಠ
ಮಂಗಳವಾರ, 17 ಜುಲೈ 2018 (14:44 IST)
ನಿರಂತರ ಮಳೆಯಿಂದಾಗಿ ಶಾಲೆಯ ಮೇಲ್ಚಾವಣಿಯಲ್ಲಿ ಕುಸಿತಗೊಂಡಿದೆ. ಹೀಗಾಗಿ ಮಳೆ, ಚಳಿ ಎನ್ನದೇ ಮಕ್ಕಳು ಬಯಲಿನಲ್ಲಿಯೇ ಕುಳಿತು ಪಾಠ ಕಲಿಯುವಂತಾಗಿದೆ.
ಮೈದಾನದಲ್ಲಿ ಕುಳಿತು ಮಕ್ಕಳು ಪಾಠ ಕಲಿಯುವ ಪರಿಸ್ಥಿತಿಯ ಚಿತ್ರಣ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮೆಳ್ಳಾಗಟ್ಟಿ ಪ್ಲಾಟ್ ಶಾಲೆಯಲ್ಲಿ ಕಂಡುಬರುತ್ತಿದೆ. ನೆಲಕ್ಕೆ ಉರಳಿದ ಹಂಚು, ರೀಪ್-ರಾಪ್ಟರ್ ಗಳು ಮಳೆಯ ರೌದ್ರಾವತಾರಕ್ಕೆ ಸಾಕ್ಷಿಯಾಗಿವೆ. ಗೋಡೆಯಿಂದ ಕಲ್ಲು, ಮಣ್ಣಿನ ಚೂರು ಬೀಳುವದನ್ನು ಗಮನಿಸಿದ ಮಕ್ಕಳು ತಕ್ಷಣ ಹೊರ ಓಡಿದರು. ಹೀಗಾಗಿ ಶಿಥಿಲಾವಸ್ಥೆಗೊಂಡ ಸುಮಾರು 25 ವರ್ಷಕ್ಕೂ ಹಳೆಯ ಕಟ್ಟಡದ ಛಾವಣಿ ಕುಸಿಯುವ ಮುನ್ನ ಅಪಾಯದಿಂದ ಪಾರಾದರು.
100 ಕ್ಕೂ ಅಧಿಕ ಮಕ್ಕಳು ಓದುತ್ತಿರುವ ಶಾಲೆಯಲ್ಲಿ ಈ ಅವಘಡ ಸಂಭವಿಸಿದೆ. ಕುಸಿದು ಗೆದ್ದಲು ತಿಂದಿರುವ ಶಾಲೆಯ ಕಾರಿಡಾರ್ ನಲ್ಲಿರುವ ಕಂಬಗಳು ನೆಲಕ್ಕೆ ಉರುಳಿವೆ. ಬಿಸಿಯೂಟ ತಯಾರಿಸುವ ಕೊಣೆಯಲ್ಲು ಗೋಡೆಯ ಕಲ್ಲು-ಮಣ್ಣು, ಹೆಂಚುಗಳು ನೆಲಕ್ಕೆ ಉರುಳಿವೆ. ಹೀಗಾಗಿ ಮಳೆ, ಚಳಿಯಲ್ಲಿ ಕುಳಿತು ಮಕ್ಕಳು ಪಾಠ ಕಲಿಯುವಂತಾಗಿದೆ.