ಕೇವಲ ಒಂದುವರೆ ತಿಂಗಳಿನಲ್ಲಿ ಲಾಲ್ಬಾಗ್ ಗೆ ಹರಿದು ಬಂದ ಜನಸಾಗರ

ಭಾನುವಾರ, 4 ಜೂನ್ 2023 (14:51 IST)
ಸಾವಿರಾರು ವರ್ಷ ಇತಿಹಾಸ ಹೋಂದಿರುವ ಸಿಲಿಕಾನ್ ಸಿಟಿಯ ಸಸ್ಯಕಾಶಿ ಹಾಗೂ ಬೂಲೋಕದ ಸ್ವರ್ಗ ಬೆಂಗಳೂರಿನ ಹೆಮ್ಮೆ ಲಾಲ್ ಭಾಗಗೆ, ಒಂದುವರೆ  ತಿಂಗಳಿನಲ್ಲಿ ದೇಶ ವಿದೇಶದಿಂದ  ಹರಿದು ಬಂತು ಲಕ್ಷ ಲಕ್ಷ  ಜನ ಸಾಗರ ಹರಿದುಬಂದಿದೆ. ಕೋವಿಡ್ ಹಿನ್ನೆಲೆ ಕಳೆದ ಮೂರ್ನಾಲ್ಕು ವರ್ಷಗಳಿಂದ  ಕಳೆಗುಂದಿದ್ದ ಭೂಲೋಕದ ಸ್ವರ್ಗ ಲಾಲಗ ಭಾಗ ಗತ ವೈಭವ ಮತ್ತೆ ಮರುಕಳಿಸಿದೆ, ಹಾಗೂ ಕೇವಲ 45 ದಿನಗಳಲ್ಲಿ 2.50 ಲಕ್ಷ ಜನರು ಸಸ್ಯಕಾಶಿ ಗೆ ಬೇಟಿ ಕೋಟಿದ್ದಾರೆ , ಇಷ್ಟುಂದು ಪ್ರಮಾಣದ ಜನರು ವಿಸಿಟ್ ಮಾಡಿದ ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಶೇಕಡಾ 45%  ರಷ್ಟು ಹೆಚ್ಚಳವಾಗಿದೆ, ಹಾಗೆಯೇ , ಕಳೆದ ಮೂರ್ನಾಲ್ಕು ವರ್ಷಗಳಿಂದ ಲಾಲ್ ಭಾಗ ಗೆ ವಿಸಿಟ್ ಮಾಡುವವರ ಸಂಖ್ಯೆ ವಿರಳಾತಿ ವಿರಳ ಆಗಿತ್ತು , ಹಾಗೆಯೇ ಸಸ್ಯಕಾಶಿ ಗೆ ಬರುವ ಜನರಿಗೆ ಹಾಪ್ ಕಾಮ್ಸ್ ನಲ್ಲಿ ಮ್ಯಾಂಗೂ ಹಾಗೂ ಮೆಕ್ಕೆಜೋಳ ಹೀಗೆ ಇನ್ನು ನಾನಾ ಬಗೆಯ ತಿಂಡಿ ತಿನಿಸುಗಳು ಸಹ ಇಲ್ಲಿ ಬರುವ ಜನರಿಗೆ ಸಿಗಲಿವೆ, ಹಾಗೂ ಈ ಸಸ್ಯ ಕಾಶಿಗೆ ಕುಟುಂಬ ಸಮ್ಮೆತ ಜನರು  ಹರಿದು  ಬರುತ್ತಿದ್ದಾರೆ,     ಕೇರಳಾ ಹಾಗೂ ತಮಿಳನಾಡು  ಆಂದ್ರಪ್ರದೇಶ ಹೀಗೆ  ದೇಶದ ಹಲವಾರು ಕಡೆಗಳಿಂದ ಪ್ರವಾಸಿಗರು ಬರುತ್ತಿದ್ದಾರೆ,
 
ಇದೇ ವರ್ಷ ಗಣರಾಜೋತ್ಸವ ಪ್ರಯುಕ್ತ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ಲಕ್ಷ ಲಕ್ಷ ಜನರು ಆಗಮಿಸಿ ಫಲಪುಷ್ಪ ಪ್ರದರ್ಶನ ವಿಕ್ಷಣೆ ಮಾಡಿದ್ರು, ಆದಾದ ನಂತರ‘‘, ನಿರೀಕ್ಷಿತ  ಸಂಖ್ಯೆಯಲ್ಲಿ ಜನರು ಬೇಟಿ ಕೊಟ್ಟಿರಲಿಲ್ಲಾ, ಆದ್ರೆ ಇವಾಗ ಬೇಸಿಗೆ ರಜೆ ಹಾಗೂ ಶಾಲೆ ಕಾಲೇಜುಗಳು ರಜೆ ಹಿನ್ನಲೆ ಜನರು ಅಂತರ ರಾಜ್ಯ ಹಾಗೂ ವಿದೇಶಗಳಿಂದ ಜನರು ಬಂದು ವಿಕ್ಷೆಣೆ ಮಾಡುತ್ತಿದ್ದಾರೆ, ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರು ಸಹ ಲಾಲ್ ಭಾಗ ಕಡೆ ಮುಖ ಮಾಡುತ್ತಿದ್ದಾರೆ , ಹಾಗೂ ಇಲ್ಲಿ ಬರುವ ಶಾಲಾ  ಮಕ್ಕಳು ಹಾಗೂ ಅಂಗವಿಕಲರಿಗೆ ದಿನವಿಡೀ ಉಚಿತ ಪ್ರವೇಶ  ಇರುತ್ತದೆ, ಹಾಗೂ ಮಕ್ಕಳಿಗೆ ಹಾಗೂ ವಯೋವೃದ್ದರಿಗೆ ಎಲೆಕ್ಟ್ರಿಕ್ ವಾಹನದ  ವ್ಯವಸ್ಥೆ ಇದೆ.
 
ಒಟ್ಟಾರೆಯಾಗಿ  ಕಳೆದ  ಮೂರ್ನಾಲ್ಕು ವಾರ್ಷಗಳಿಂದ  ಗತವೈಭವ ಕಳೆದುಕೊಂಡಿದ್ದ ಲಾಲ್ ಬಾಗ್  ಗೆ ಈಗ ಮತ್ತೆ ಗತವೈಭವ ಆರಂಭ ಮಾಡಿಕೊಂಡಿದೆ ಅಂತರಾಜ್ಯ ಹಾಗೂ ದೇಶ ವಿದೇಶಗಳಿಂದ ಜನರು ಬರುತ್ತಿದ್ದು ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನು ಹೆಚ್ಚಾಗುವುದು ನಿಶ್ಚಿತ ಅಂತಿದ್ದಾರೆ ಲಾಲ್ ಭಾಗ್ ನ ಜಂಟಿ ನಿರ್ದೇಶಕರು..
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ