ಮದುವೆಯಾಗು ಎಂದಿದ್ದಕ್ಕೆ ಪ್ರೀತಿಸಿದ ಯುವತಿಯನ್ನೇ ಮುಗಿಸಿದ ಪಾಪಿ
ಪ್ರೀತಿಸಿದ ಯುವತಿ ಪದೇ ಪದೇ ಮದುವೆಯಾಗಲು ಎಂದು ಒತ್ತಾಯಿಸಿದ್ದಕ್ಕೆ ಕೋಪಗೊಂಡ ಸೃಜನ್ ಆಕೆಯನ್ನು ಕೊಲೆ ಮಾಡಿ, ಹೂತಿಟ್ಟಿದ್ದಾನೆ. ಇನ್ನೂ ಮಗಳು ಮನೆಗೆ ವಾಪಾಸ್ಸಾಗದನ್ನು ಕಂಡು ಪೋಷಕರು ಪೊಲೀಸರಿಗೆ ನಾಪತ್ತೆ ಪ್ರಕರಣ ದೂರು ನೀಡಿದ್ದಾರೆ. ಈ ವೇಳೆ ಸೃಜನ್‌ರನ್ನು ಪೊಲೀಸರು ವಿಚಾರಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇಂದು ಎಸಿ ಸಮ್ಮುಖದಲ್ಲಿ ಯುವತಿಯ ಶವ ಹೊರಗೆ ತೆಗೆಯಲು ಸಿದ್ದತೆ ನಡೆಯುತ್ತಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಂ ಹೂಡಿದ್ದಾರೆ.