'ಈ ಸಲ ಕಪ್‌ ನಮ್ದೆ' ಎಂದಾ ಸೌಮ್ಯ ರೆಡ್ಡಿಗೆ ಕೊನೆಗೆ ಕೈಗೆ ಬಂದಿದ್ದೇನು

sampriya

ಮಂಗಳವಾರ, 4 ಜೂನ್ 2024 (15:48 IST)
Photo By X
ಬೆಂಗಳೂರು: ಗೆಲುವಿನ ಲೆಕ್ಕಾಚಾರದಲ್ಲಿ ಬೆಂಗಳೂರು ದಕ್ಷಿಣದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಮಗಳು ಸೌಮ್ಯ ರೆಡ್ಡಿ ಅವರನ್ನು ಕಣಕ್ಕಿಳಿಸಿದ ಕಾಂಗ್ರೆಸ್‌ ಲೆಕ್ಕಾಚಾರ ಕೊನೆಗೂ ಕೆಲಸ ಮಾಡಲಿಲ್ಲ. 

ಭಾರೀ ಕುತೂಹಲ ಕೆರಳಿಸಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಭರ್ಜರಿ ಮುನ್ನಡೆ ಸಾಧಿಸಿ, ಗೆಲುವಿನ ದಡ ಸೇರುತ್ತಿದ್ದಾರೆ. ಈ ಮೂಲಕ ಎರಡನೇ ಬಾರಿ ಲೋಕಸಭೆ ಪ್ರವೇಶಿಸುವ ತೇಜಸ್ವಿ ಕನಸು ನನಸಾಗುವ ಹಂತಕ್ಕೆ ಬಂದು ನಿಲ್ಲುವಂತೆ ಕಾಣುತ್ತಿದೆ.

2019ರಲ್ಲಿ ಜಯನಗರ ವಿಧಾಸನಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೇಡ್ಡಿ ಅವರಿಗೆ ಈ ಬಾರಿ ಬೆಂಗಳೂರು ದಕ್ಷಿಣದಿಂದ ಟಿಕೆಟ್‌ ನೀಡಿತ್ತು. ಅದರಂತೆ ಬಿರುಸಿನ ಪ್ರಚಾರ ಮಾಡಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರನ್ನು ಸೋಲಿಸುವುದಾಗಿ ಹೇಳಿದ್ದರು.

ಇನ್ನೂ ಪ್ರಚಾರದ ವೇಳೆ ಸೌಮ್ಯ ರೆಡ್ಡಿ ಅವರು ಈ ಸಲ ಕಪ್‌ ನಮ್ದೆ ಎಂದು ಹೇಳಿದ್ದರು. ಆರಂಭಿಕ ಹಂತದ ಮತ ಎಣಿಕೆಯಲ್ಲಿ ಸೌಮ್ಯ ರೆಡ್ಡಿಗೆ ಹಿನ್ನಡೆಯಾಗುತ್ತಿರುವಾಗಲೇ ಬಿಜೆಪಿಗರು ಸೌಮ್ಯ ಹೇಳಿಕೆ ನೀಡಿದ ವಿಡಿಯೋವನ್ನು ಟ್ರೋಲ್‌ ಮಾಡಿ ಕಪ್‌ ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ