ಡಿಸಂಬರ್ 5 ರ ರಾತ್ರಿ 7.30 ರ ಸಮಯ. ಆ ದಿನರಾತ್ರಿ ಪೊಲೀಸ್ರು ಬರೋದು ಸ್ವಲ್ಪ ಲೇಟ್ ಆಗಿದ್ದಿದ್ರು ಏರಿಯಾದಲ್ಲಿ ಒಂದೆರಡು ಹೆಣ ಬೀಳ್ಳಿತ್ತು. ಹೌದು, ಕಳೆದ ವಾರ ಗಾಂಜಾ ಮಾರಾಟ ಮಾಡ್ತಿದ್ದ ಪೆಡ್ಲರ್ಗಳಾದ ಅಯೂಬ್ ಹಾಗೂ ರೋಷನ್ ಲಾಂಗ್ ಹಿಡಿದು ಇಡೀ ಏರಿಯಾದಲ್ಲಿ ಓಡಾಡಿದ್ರು. ತಮ್ಮ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದ ಮಾಹಿತಿದಾರನನ್ನ ಕೊಲೆ ಮಾಡೋಕೆ ಸಂಚು ಮಾಡಿ ಇಡೀ ಏರಿಯಾದಲ್ಲಿ ಹುಡುಕಾಡ್ತಿದ್ರು. ಆ ಮಾಹಿತಿದಾರ ಸಿಗಲಿಲ್ಲ ಅಂತ ದಾರಿಯಲ್ಲಿ ಸಿಕ್ಕ ಸಿಕ್ಕವರನ್ನ ಅಟ್ಟಾಡಿಸ್ತಿದ್ರು. ಇದ್ರಿಂದ ಗಾಬರಿಗೊಂಡಿದ್ದ ಸ್ಥಳೀಯರು
ಆಯೂಬ್ ರೌಡಿ ಶೀಟರ್ ,ರೋಷನ್ ಮೇಲೂ ಆರ್ ಟಿ.ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಕೇಸ್ ಇದೆ.ಇಬ್ಬರು ಸೇರಿಕೊಂಡು ಡ್ರಗ್ಸ್ ಮಾರಾಟ ಮಾಡ್ತಿದ್ರಂತೆ.ಇದೇ ವಿಚಾರವನ್ನು ಸ್ಥಳೀಯನೊಬ್ಬ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದ.ವಿಚಾರ ಗೊತ್ತಾಗಿ ಆಯೂಬ್ ನನ್ನ ಬಗ್ಗೆನೇ ಪೊಲೀಸ್ರಿಗೆ ಹೇಳ್ತೀರಾ.ನಿಮಗೊಂದು ಗತಿ ಕಾಣಿಸ್ತೀನಿ ಅಂತ ಲಾಂಗ್ ಹಿಡಿದು ಮಾಹಿತಿ ಕೊಟ್ಟವನ ರಕ್ತ ಹರಿಸಲು ಸ್ಕೆಚ್ ಹಾಕಿದ್ದ.ಅದೃಷ್ಟ ಚೆನ್ನಾಗಿತ್ತು ಮಾಹಿತಿ ಕೊಟ್ಟವನು ಅಂದು ಇವರ ಕಣ್ಣಿಗೆ ಬಿದ್ದಿರಲಿಲ್ಲ. ಹೀಗಾಗಿ ಮಾಹಿತಿದಾರನ ಜೀವ ಉಳಿದಿತ್ತು.ಆದ್ರೆ ಪೊಲೀಸರು ಹೇಳೋದೆ ಬೇರೆ ಆ ರೀತಿಯಾದ ಮಾಹಿತಿ ದಾರನ ಕೊಲೆಗೆ ಸ್ಕೆಚ್ ಹಾಕಿರಲಿಲ್ಲ.ಆತನ ಮೇಲೆ ಯಾವುದೇ ಗಾಂಜಾ ಕೇಸ್ ಕೂಡ ಇಲ್ಲ.ಕುಡಿದ ಮತ್ತಲ್ಲಿ ಈ ರೀತಿ ಮಚ್ಚು ಹಿಡಿದು ಓಡಾಡಿದ್ದಾನಷ್ಟೇ ಎಂದಿದ್ದಾರೆ.
ಏನೇ ಹೇಳಿ ಪೊಲೀಸರಿಗೆ ಮಾಹಿತಿ ಕೊಟ್ಟ ತಪ್ಪಿಗೆ ಮಾಹಿತಿದಾರನ ಜೀವ ಅಪಾಯಕ್ಕೆ ಸಿಲುಕಿತ್ತು. ಇನ್ನು ಈ ಮಾಹಿತಿ ಹೇಗೆ ಯಾರಿಂದ ಲೀಕ್ ಆಯಿತು ಅನ್ನೋದು ಇನ್ನೂ ನಿಗೂಢವಾಗಿದೆ.ಅಷ್ಟೇ ಅಲ್ಲದೆ ಮಾಹಿತಿದಾರ ಸಿಗಲಿಲ್ಲ ಅಂತ ಏರಿಯಾದಲ್ಲಿ ಸಿಕ್ಕ ಸಿಕ್ಕ ಹುಡುಗರನ್ನ ಅಟ್ಟಾಡಿಸಿದ್ದರು. ಇದ್ರಿಂದಾಗಿ ಅಮಾಯಕ ಸ್ಥಳೀಯರ ಜೀವವೂ ಅಪಾಯಕ್ಕೆ ಸಿಲುಕಿದ್ದು ದುರಂತ.ಘಟನೆ ನಡೆದ ದಿನವೇ ಇಬ್ಬರು ಆರೋಪಿಗಳನ್ನು ಬಂಧಿಸಿರೊ ರಾಜಗೋಪಾಲನಗರ ಠಾಣೆ ಪೊಲೀಸರು ಇಬ್ಬರನ್ನು ಜೈಲಿಗಟ್ಟಿದ್ದಾರೆ.