ಬಿಎಂಟಿಸಿಯಲ್ಲಿ ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್

ಶುಕ್ರವಾರ, 24 ಮಾರ್ಚ್ 2023 (14:20 IST)
ಬಿಎಂಟಿ ಬಸ್ ನಲ್ಲಿ ಕಂಡಕ್ಟರ್ ಸಜೀವ ದಹನವಾದ ಕೇಸ್ ಪೊಲೀಸ್ರ ತನಿಖೆಯಲ್ಲಿ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ.ಬಿಎಂಟಿಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿಲ್ಲ ಅನ್ನೋದು ಕನ್ಫರ್ಮ್ ಆಗಿದ್ದು. ನಿರ್ವಾಹಕ ಮುತ್ತಯ್ಯ ಆತ್ಮಹತ್ಯೆಗೆ ಮಾಡಿಕೊಂಡಿರೋ ಅನುಮಾನ ವ್ಯಕ್ತವಾಗಿದೆ.
 
ಹಾಗಾದ್ರೆ ಪೊಲೀಸರ ಗುಮಾನಿಗೆ ಕಾರಣಗಳೇನು  ಅಂತ ನೋಡೋದಾದ್ರೆ‌.ಬಸ್ ಹಾಲ್ಟ್ ಆದ ನಂತರ ಹೊರ ಹೋಗಿ  ಮಧ್ಯರಾತ್ರಿ ಒಂದು ಗಂಟೆ ವರೆಗೂ ಮುತ್ತಯ್ಯ ಫೋನ್ ನಲ್ಲೇ ಮಾತನಾಡಿದ್ದಾನೆ.ಡ್ರೈವರ್ ಪ್ರಕಾಶ್ ನನ್ನ ರೂಮ್ ನಲ್ಲಿ ಮಲಗವಂತೆ ಹೇಳಿ ಆ ದಿನ ಕಲೆಕ್ಷಮ್ ಹಣವನ್ನು ಪ್ರಕಾಶ್ ಕೈಗೆ ಕೊಟ್ಟಿದ್ದಾನೆ. ಡ್ರೈವರ್ ಮಲಗಿದ ನಂತರ ಮುತ್ತಯ್ಯ ಬಸ್ ನಿಂದ ಹೊರ ಹೋಗಿ ಬಂದಿರುವ ಮಾಹಿತಿ ಪತ್ತೆಯಾಗಿ ರಾತ್ರಿಯಲ್ಲಿ ಮುತ್ತಯ್ಯ ಯುಪಿಐ ಐಡಿಯಿಂದ ಕೊನೆಯದಾಗಿ ಹಣ ವರ್ಗಾವಣೆಯಾಗಿದೆ‌.
 
ಸುಮಾರು 700 ರೂಪಾಯಿ ಹಣ ವರ್ಗಾವಣೆ ಬೆಳಕಿಗೆ ಬಂದಿದೆ. ಹಣ ವರ್ಗಾವಣೆಯಾಗಿರುವುದು ಸ್ವಲ್ಪ ದೂರದಲ್ಲಿದ್ದ ಪೆಟ್ರೋಲ್ ಬಂಕ್ ಖಾತೆಗೆ.ಪೆಟ್ರೋಲ್ ಬಂಕ್ ಗೆ ಹಣ ಪಾವತಿಸಿ ಪೆಟ್ರೋಲ್, ಡಿಸೇಲ್ ಖರೀದಿ ಮಾಡಿದ್ದು, ಐದು ಲೀಟರ್ ಪೆಟ್ರೋಲ್, ಎರಡು ಲೀಟರ್ ಡಿಸೇಲ್ ನ ವಾಟರ್ ಕ್ಯಾನ್ ನಲ್ಲಿ ಮುತ್ತಯ್ಯ  ಖರೀದಿ ಮಾಡಿದ್ದಾನೆ. ಈ ಬಗ್ಗೆ ಪೆಟ್ರೋಲ್ ಬಂಕ್ ಸಿಬ್ಬಂದಿಯಿಂದ ಮಾಹಿತಿ  ನೀಡಿದ್ದು ಸಿಸಿಟಿವಿಯಲ್ಲೂ ಈ ದೃಶ್ಯ ಸೆರೆಯಾಗಿದೆ. ಸದ್ಯ ಬ್ಯಾಡರಹಳ್ಳಿ ಪೊಲೀಸ್ರು ತನಿಖೆಯಲ್ಲಿ ಈ ಅಂಶಗಳು ಪತ್ತೆಯಾಗಿವೆ‌. ಹಣಕಾಸಿನ‌ ತೊಂದರೆಗೆ ಸಿಲುಕಿದ್ದ ಮುತ್ತಯ್ಯ ಮುಂಜಾನೆ ವೇಳೆಗೆ ಬಸ್ ನ ಎಲ್ಲ ಕಿಟಕಿಗಳು ಹಾಗೂ ಡೋರ್ ಒಳಗಿನಿಂದ ಕ್ಲೋಸ್ ಮಾಡಿ ಪೆಟ್ರೋಲ್ ಡಿಸಲ್ ಸುರಿದು ಬೆಂಕಿ ಹಚ್ಚಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಸದ್ಯ ಎಫ್ ಎಸ್ ಎಲ್ ವರಿದಿಗೆ ಕಾಯುತ್ತಿದ್ದು ವರದಿ ಬಂದ ನಂತರ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ