ಪ್ರತಿ ರಂಗದಲ್ಲಿಯೂ ಮಹಿಳೆಯ ಸಾಧನೆ

ಶುಕ್ರವಾರ, 11 ಮಾರ್ಚ್ 2022 (20:30 IST)
ಸಮಾಜದಲ್ಲಿ ಹೆಣ್ಣಿಗೆ ತನ್ನದೇ ಆದ ಸ್ಥಾನಮಾನವಿದೆ. ಹೆಣ್ಣು ಎಲ್ಲಾರಂಗದಲ್ಲೂ ತನ್ನ ಛಾಪನ್ನ ಮೂಡಿಸುತ್ತಿದ್ದಾಳೆ. ಆದರೆ ಹೆಣ್ಣಿನ ಸಾಧನೆ ಮಾತ್ರ ಜಗತ್ತಿಗೆ ಕಾಣದಂತೆ ಎಲೆಮಾರಿಕಾಯಿಯಾಗಿ ಉಳಿದಿದೆ. ಕೆಲವು ಮಹಿಳೆಯರು ಸಾಧನೆ ಮಾಡುವುದಕ್ಕೆ , ತನ್ನ ಕಾಲ ಮೇಲೆ ತಾನು ನಿಲ್ಲುವುದಕ್ಕೆ ಆಗುವುದಿಲ್ಲ. ಅನೇಕ ಅಡಚಡೆಗಳು, ದೌರ್ಜನಗಳು ನಿತ್ಯ ನಡೆಯುತ್ತಿರುತ್ತೆ. ಆದರೆ ಇದನ್ನೆಲ್ಲಾ ಮೆಟ್ಟಿನಿಂತು ಸಾಧನೆ ಮಾಡಿ ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡ ಮಹಿಳೆಯ ಸಾಧನೆಯ ಅನಾವರಣ 
 
ಸಾಧನೆ ಎಂಬ ಈ  ಪದ ತುಂಬ ದೊಡ್ಡದ್ದು , ಆದ್ರೆ ಈ ಪದದಂತೆ ಸಾಧನೆ ಮಾಡುವುದು ಸುಲಭದ ಮಾತಲ್ಲ. ಆದ್ರೆ ಇಲ್ಲಿ  ಒಬ್ಬ ಮಹಿಳೆ ಅಪ್ಪ-ಅಮ್ಮ ಇಲ್ಲದೇ ಅನಾಥೆಯಾಗಿ ಬೆಳೆದಳು. ಯಾರೋದೋ ಆಶ್ರಯದಲ್ಲಿ  ಬೆಳೆದ ಶೈಲಾಜ 10 ನೇ ತರಗತಿವರೆಗೂ ಓದಿದ್ದಳು . ನಂತರ ಸಂಗೀತ, ನೃತ್ಯ ಕಲಿತ್ತಿದ್ದ ಈಕೆ ಚಿಕ್ಕ ವಯಸ್ಸಿನಲ್ಲಿಯೇ ಕಾರ್ಯಕ್ರಮಗಳನ್ನ ಕೊಡ್ತಾ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದಳು. ಈಕೆ ಚಂದನ ಟಿವಿಯಲ್ಲಿಯೂ ವಿಶೇಷವಾದ ಕಾರ್ಯಕ್ರಮಗಳನ್ನ ಕೊಡುತ್ತಿದ್ದಳು. ತದನಂತರ ಸಾಧುಕೋಕಿಲ, ಗುರುಕಿರಣ್ ಸೇರಿದಂತೆ ಅನೇಕ ದೊಡ್ಡ ಗಾಯರಿಗೆ ಹಿನ್ನೆಲೆ ಧ್ವನಿಯನ್ನ ಕೂಡ ಕೊಡುತ್ತಿದ್ದಳು. ಹೀಗೆ ಸಾಧನೆ ಮಾಡಬೇಕಾದ್ರೆ ಒಬ್ಬ ವ್ಯಕ್ತಿಯೊಂದಿಗೆ ಮದುವೆಯಾಗುತ್ತೆ . ಮದುವೆಯಾದ ನಂತರ ಪತಿ ಸಾಧನೆಗೆ ಸಪೋರ್ಟ್ ಮಾಡದೇ ಸಾಧನೆಗೆ ಅಡ್ಡಗಾಲು ಹಾಕ್ತಾನೆ. ಮನೆಯಲ್ಲಿಯೇ ಈಕೆಯನ್ನ ಬಂಧಿಸಿಡುತ್ತಾನೆ. ಇಬ್ಬರು ಮಕ್ಕಳು ಆದ್ಮೇಲೂ ಸಾಧನೆ ಮಾಡಲು ಬಿಡಲ್ಲ . ಹೀಗೆ ಗಂಡ- ಹೆಂಡತಿ ನಡುವೆ ನಿತ್ಯ ಜಗಳವಾಗಿ ಅರ್ಧದಲ್ಲೇ ಈಕೆಯನ್ನ ಪತಿ ಬಿಟ್ಟು ಹೋಗ್ತಾನೆ. ಆಗ ಈಕೆಗೆ ದಿಕ್ಕು ತೋಚದಂತೆಯಾಗಿ ಬದುಕು ಕಟ್ಟಿಕೊಳ್ಳಲಾಗದೆ ಹರಸಾಹಸ ಪಡ್ತಾಳೆ, ರಾತ್ರಿ ಟೈಮ್ ನಲ್ಲಿ ಟೀ ಮಾರಿಕೊಂಡು ಜೀವನ ನಡೆಸುತ್ತಾಳೆ. .ಹೀಗೆ ಕಷ್ಟ ಪಟ್ಟು ಪಟ್ಟು  ತನ್ನದೇ ಆದ ಆಟೋವನ್ನ ತೆಗೆದುಕೊಂಡು ಸ್ವಾಭಿಮಾನಿಯಾಗಿ ಬದುಕು ಕಟ್ಟಿಕೊಳ್ತಾಳೆ.ಆಟೋವನ್ನ ಓಡಿಸಿಕೊಂಡು ರಂಗಭೂಮಿಯಲ್ಲಿ ಹೆಸರು ಮಾಡ್ತಾ  ಬದುಕು ಸಾಗಿಸುತ್ತಿದ್ದಾಳೆ . ಇತ್ತಾ ತನ್ನ ಇಬ್ಬರು ಹೆಣ್ಣು ಮಕ್ಕಳನ್ನ ಓದಿಸಿಕೊಂಡು ಹಗಲು ರಾತ್ರಿ ಎನ್ನದೇ ಕಷ್ಟಪಾಡುತ್ತಿದ್ದಾಳೆ .
 
ಇತ್ತಾ ಸಾಮಾನ್ಯ ಮಹಿಳಾ ಮಹಿಳಾ ದಿನಾಚರಣೆಯ ಬಗ್ಗೆ ಗೊತ್ತಿಲ್ಲದೇ ಆದ ರಂಗದಲ್ಲಿ ಅಂದ್ರೆ ಅಮ್ಮ ಆಗಿ, ಗೃಹಿಣಿ, ಕೂಲಿ ಕೆಲಸ ಮಾಡುವವಳಾಗಿ , ಪೌರ ಕಾರ್ಮಿಕರಾಗಿ , ವೈದ್ಯೆಯಾಗಿ ಹೀಗೆ ಹಲವು ರಂಗಗಳಲ್ಲಿ ಮಹಿಳೆ ಸಾಧನೆ ಮಾಡ್ತಾ ತನ್ನ ಕುಟುಂಬದವರಿಗಾಗಿ ಹಗಲಿರುಳು ಶ್ರಮಿಸಿದ್ದಾಳೆ . ತನ್ನ ಜೀವನವನ್ನ ಸವಿಸುತ್ತಿದ್ದಾಳೆ.
 
ಹೆಣ್ಣು ಅಂದರೆ ಎಷ್ಟೋ ಜನರು ಇವಳ ಕೈಯಲ್ಲಿ ಏನು ಆಗಲ್ಲ ಅಂತಾ ಮೂಗುಮುರಿತಾರೆ. ಆದರೆ ಈಗ ಹೆಣ್ಣು ಎಲ್ಲಾ ರಂಗದಲ್ಲೂ ತನ್ನದೇ ಆದ ಛಾಪನ್ನ ಮೂಡಿಸುತ್ತಾ ಕುಟುಂಬದ ಜವಬ್ದಾರಿಯ ಜೊತೆ ಸಾಧನೆಯನ್ನ ಕೂಡ ಮಾಡ್ತಾ ಮುನ್ನುಗುತ್ತಿದ್ದಾಳೆ.ಹೀಗೆ ನಿಮ್ಮ ಧೈರ್ಯ, ಛಲ ಮುಂದುವರಿಯಲಿ ಎಂಬುದೇ ನಮ್ಮ ಆಶಯ .

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ