ಮುಂಬೈನಿಂದ ಬಂದು ಚೆಕ್ ಪೋಸ್ಟ್ ಸ್ಕ್ರೀನಿಂಗ್ ವೇಳೆ ಮೃತಪಟ್ಟ ಮಹಿಳೆ
ರಾಜ್ಯದ ಚೆಕ್ ಪೋಸ್ಟ್ ವೊಂದರಲ್ಲಿ ಮುಂಬೈನಿಂದ ಬಂದ ಮಹಿಳೆಯೊಬ್ಬಳನ್ನು ಸ್ಕ್ರೀನಿಂಗ್ ಮಾಡುವಾಗ ಆ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.
ಆಕೆಯನ್ನು ಯಾದಗಿರಿ ಕೋವಿಡ್ ಆಸ್ಪತ್ರೆಗೆ ಕರೆ ತರುವ ವೇಳೆ ಮೃತಪಟ್ಟಿದ್ದಾಳೆ. ಮಹಾರಾಷ್ಟ್ರ ರಾಜ್ಯದ ಮುಂಬೈನ ಭರತ ನಗರ ಪ್ರದೇಶದಿಂದ ಖಾಸಗಿ ಕಾರೊಂದರಲ್ಲಿ ಅವರು ಯಾದಗಿರಿ ಜಿಲ್ಲೆಯ ಅರಕೇರಾ.ಕೆ ಗ್ರಾಮದ ಬಸವನಗರ ತಾಂಡಾಕ್ಕೆ ತೆರಳುತ್ತಿದ್ದರು.
ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಮಹಿಳೆ ಕುಸಿದು ಬಿದ್ದಿದ್ದು, ಕೊರೊನಾ ಶಂಕೆ ವ್ಯಕ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.