ಉದ್ಯೋಗಕ್ಕಾಗಿ ಅದು ಕೊಡು ಎಂದು, ವಿಡಿಯೋ ಕಾಲ್ ನಲ್ಲಿ ಮಾಡಬಾರದ್ದು ಮಾಡಿದ ಎಎಪಿ ನಾಯಕ

Krishnaveni K

ಮಂಗಳವಾರ, 28 ಮೇ 2024 (10:31 IST)
Photo Credit: X
ನವದೆಹಲಿ: ಉದ್ಯೋಗಕ್ಕಾಗಿ ತನ್ನ ಕಾಮನೆ ಪೂರೈಸು ಎಂದು ಎಎಪಿ ನಾಯಕ ಬಾಲ್ಕರ್ ಸಿಂಗ್ ವಿಡಿಯೋ ಕಾಲ್ ನಲ್ಲಿ ಮಹಿಳೆಯೊಬ್ಬರಿಗೆ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

21 ವರ್ಷದ ಯುವತಿಯೊಬ್ಬಳಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ವಿಡಿಯೋ ಕಾಲ್ ನಲ್ಲಿ ಖಾಸಗಿ ಅಂಗಾಂಗ ಪ್ರದರ್ಶಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ನಾಯಕ ತೇಜೀಂದರ್ ಪಾಲ್ ಸಿಂಗ್ ಬಗ್ಗಾ ಈ ಆರೋಪ ಮಾಡಿದ್ದಾರೆ.

ವಿಡಿಯೋ ಕರೆಯಲ್ಲಿ ತನ್ನ ಖಾಸಗಿ ಅಂಗಾಂಗ ಪ್ರದರ್ಶಿಸಿದ್ದಲ್ಲದೆ, ಮಹಿಳೆಗೆ ಬಟ್ಟೆ ಬಿಚ್ಚಲು ಒತ್ತಾಯಿಸಿದ್ದಾರೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಪಂಜಾಬ್ ಪೊಲೀಸರಿಗೆ ಸೂಚಿಸಿದೆ.

ಉದ್ಯೋಗ ಹುಡುಕಾಡುತ್ತಿರುವ ಮಹಿಳೆಯರ ಮೇಲೆ ಬಾಲ್ಕರ್ ಸಿಂಗ್ ಇದೇ ರೀತಿ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾರೆ ಎಂಬ ಬಿಜೆಪಿ ನಾಯಕ ತೇಜಿಂದರ್ ಪಾಲ್ ಆರೋಪದ ಬಗ್ಗೆ ಗಂಭೀರವಾಗಿ ತನಿಖೆ ನಡೆಸಲು ಪೊಲೀಸರಿಗೆ ಮಹಿಳಾ ಆಯೋಗ ಸೂಚಿಸಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲ್ಕರ್ ಸಿಂಗ್ ನನಗೂ ಈ ಘಟನೆಗೂ ಸಂಬಂಧವಿಲ್ಲ. ಇದರಲ್ಲಿ ನನ್ನ ತಪ್ಪಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ