ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವದ ಸಂಭ್ರಮ

ಶನಿವಾರ, 25 ಆಗಸ್ಟ್ 2018 (17:51 IST)
ಬೇಡಿ ಬಂದವರನ್ನು ಕರಪಿಡಿದು ಕಾಪಾಡುವ ಕರುಣಾಳು, ಕಲಿಯುಗದ ಕಲ್ಪತರು ಗುರು ರಾಘವೇಂದ್ರ ಸ್ವಾಮಿಗಳ  ಆರಾಧನಾ ಮಹೋತ್ಸವ ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಭಕ್ತಿ ಹಾಗೂ ಚೈತನ್ಯದ ವಾತಾವರಣದಲ್ಲಿ ನಡೆಯುತ್ತಿದೆ.

ದೇಶದ ಮೂಲೆ-ಮೂಲೆಗಳಿಂದ ಭಕ್ತಾದಿಗಳು 347ನೇ ಆರಾಧನಾ ಮಹೋತ್ಸವಕ್ಕೆ ಆಗಮಿಸುತ್ತಿದ್ದಾರೆ. ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಆ.27ರಂದು ರಥೋತ್ಸವ ಜರುಗಲಿದೆ.

ಮಹೋತ್ಸವ ಅಂಗವಾಗಿ ಮೂಲ ರಾಮದೇವರ ಪೂಜೆಗೆ 60 ಕೆ.ಜಿ. ತೂಕದ ಚಿನ್ನದ ಮಂಟಪ ಮತ್ತು ಚಿನ್ನದಿಂದ ಮಾಡಿದ ಪೂಜಾ ಸಾಮಗ್ರಿಗಳನ್ನು ಅರ್ಪಿಸುವ ಮೂಲಕ ಶ್ರೀಮಠದಲ್ಲಿ ಎಲ್ಲವೂ ಸ್ವರ್ಣಮಯ ಎನ್ನುವಂತೆ ಮಾಡಲಾಗಿದೆ. ಶ್ರೀಮಠ ವಿದ್ಯಾದಾನ, ಅನ್ನದಾನದ ಜತೆಗೆ ಪರಿಸರವನ್ನು ಹಚ್ಚ ಹಸಿರಾಗಿರುವ ನಿಟ್ಟಿನಲ್ಲೂ ‘ಹಸಿರು ಮಂತ್ರಾಲಯ’ ಯೋಜನೆ ಹಮ್ಮಿಕೊಂಡಿದೆ. ಸಡಗರದಿಂದ ಆರಾಧನಾ ಮಹೋತ್ಸವ ನಡೆಯುತ್ತಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ