ಲೋಕಾಯುಕ್ತ ಕಚೇರಿಯಲ್ಲೇ ಲಂಚ....!

ಗುರುವಾರ, 6 ಏಪ್ರಿಲ್ 2017 (18:27 IST)
ಭ್ರಷ್ಟರಿಗೆ ಸಿಂಹಸ್ವಪ್ನವಾಗಿದೆ ಎನ್ನಲಾದ ಲೋಕಾಯುಕ್ತ ಕಚೇರಿಯಲ್ಲಿಯೇ ಸಿಬ್ಬಂದಿಯೊಬ್ಬ ಲಂಚಕ್ಕೆ ಕೈಯೊಡ್ಡಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ರೆಡ್ ಹ್ಯಾಂಡಾಗಿ ಸಿಕ್ಕುಬಿದ್ದಿದ್ದಾರೆ.
 
ಲೋಕಾಯುಕ್ತ ಕಚೇರಿಯಲ್ಲಿ ಜಡ್ಜ್‌ಮೆಂಟ್ ರೈಟರ್ ಆಗಿರುವ ಸಂಕಣ್ಣ, ಪೊಲೀಸ್ ಪೇದೆ ಕೇಶಪ್ಪ ಬಳಿ ಪ್ರಮಾಣ ಪತ್ರ ನೀಡಲು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟದ್ದ ಎನ್ನಲಾಗಿದೆ. ನಂತರ 34 ಸಾವಿರಕ್ಕೆ ಒಪ್ಪಂದವಾಗಿತ್ತು.
 
ಲೋಕಾಯುಕ್ತ ಬಲೆಗೆ ಬಿದ್ದಿದ್ದ ಬಳ್ಳಾರಿ ಮೂಲಕ ಪೊಲೀಸ್ ಪೇದೆ ಕೇಶಪ್ಪನನ್ನು ಪ್ರಕರಣದಿಂದ ಮುಕ್ತಗೊಳಿಸುವುದಾಗಿ ಭರವಸೆ ಕೊಟ್ಟು 34 ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದನು. ಮೊದಲ ಕಂತಿನಂತೆ 25 ಸಾವಿರ ರೂಪಾಯಿ ಲಂಚ ಪಡೆಯುವಾಗ ಬಂಧಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪೊಲೀಸ್ ಪೇದೆ ಕೇಶಪ್ಪ ಇಂದು ಲೋಕಾಯುಕ್ತ ಜಡ್ಜ್‌ಮೆಂಟ್ ರೈಟರ್ ಸಂಕಣ್ಣ ಅವರಿಗೆ 25 ಸಾವಿರ ರೂಪಾಯಿ ಲಂಚ ನೀಡುತ್ತಿರುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿ ಗಿರೀಶ್ ನೇತೃತ್ವದ ತಂಡ ದಾಳಿ ಮಾಡಿದೆ.
 
ಆರೋಪಿ ಸಂಕಣ್ಣನನ್ನು ವಶಕ್ಕೆ ತೆಗೆದುಕೊಂಡ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ