ಹಿಜಾಬ್ ತೆಗೆದು ಶಾಲಾ ಕೊಠಡಿ ಪ್ರವೇಶ

ಸೋಮವಾರ, 14 ಫೆಬ್ರವರಿ 2022 (12:41 IST)
ಬಾಗಲಕೋಟೆಯಲ್ಲಿ ಹೈಸ್ಕೂಲ್ಗೆ ಹಿಜಾಬ್ ಧರಿಸಿಕೊಂಡು ಕೆಲ ವಿದ್ಯಾರ್ಥಿನಿಯರು ಬರುತ್ತಿದ್ದಾರೆ.
 
ಶಾಲೆ ಒಳಗಡೆ ಬಂದು ಹಿಜಾಬ್ ತೆಗೆದು ತರಗತಿ ಕೊಠಡಿಗೆ ಪ್ರವೇಶ ಮಾಡುತ್ತಿದ್ದಾರೆ. ಹಿಜಾಬ್ ಧರಿಸಿ ಬಂದ ಅನ್ಫಿಯಾ ಎಂಬ ವಿದ್ಯಾರ್ಥಿನಿ ಮಾತನಾಡಿ, ನಾವು ಮನೆಯಿಂದ ಹಿಜಾಬ್ ಧರಿಸಿಕೊಂಡು ಬರುತ್ತೇವೆ.

ಕ್ಲಾಸ್ ರೂಮಿಗೆ ಹೋಗುವಾಗ ಹಿಜಾಬ್ ತೆಗೆಯುತ್ತೇವೆ. ಮನೆಯಿಂದ ಹಾಕಿಕೊಂಡು ಬರುತ್ತೇವೆ. ಕ್ಲಾಸ್ ರೂಮಲ್ಲಿ ಧರಿಸೋದಿಲ್ಲ. ಮನೆಯಲ್ಲಿ ಹಾಗೂ ಶಿಕ್ಷಕರು ಕ್ಲಾಸ್ ರೂಮಲ್ಲಿ ಹಾಕಬೇಡ ಅಂದಿದ್ದಾರೆ. ನಾವು ಮೊದಲಿಂದಲೂ ಧರಿಸುತ್ತಾ ಬಂದಿದ್ದೇವೆ. ಆದರೆ ಕ್ಲಾಸಲ್ಲಿ ಹಾಕುತ್ತಿರಲಿಲ್ಲ.

ಸಮವಸ್ತ್ರ ನಮಗೆ ಮುಖ್ಯ ಅದಕ್ಕೆ ಗೌರವ ಕೊಡುತ್ತೇವೆ. ಮೊನ್ನೆ ನಡೆದ ಗಲಾಟೆಯಿಂದ ನಮಗೆ ಬಹಳ ಭಯ ಆಗಿತ್ತು. ನಮ್ಮ ಧರ್ಮದಲ್ಲಿ ಹಿಜಾಬ್ ಇದೆ. ಆದರೆ ಕ್ಲಾಸ್ ರೂಮಲ್ಲಿ ಹಾಕಬಾರದು ಅಂತ ಅಭಿಪ್ರಾಯಪಟ್ಟಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ