ವಿಮಾನ ನಿಲ್ದಾಣ ರಸ್ತೆಯ ಕಾಡಿಗೇನಹಳ್ಳಿ ಗೇಟ್ ಬಳಿ ಅತೀ ವೇಗದಿಂದ ಬಂದ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ಸನಿಹದ ಮೋರಿಯೊಳಗೆ ಬಿದ್ದು ಸಿಲುಕಿಕೊಂಡಿದೆ. ಇದರಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ ಪವಾಡ ಸದೃಶ ರೀತಿಯಲ್ಲಿ ಕಾರಿನಲ್ಲಿದ್ದ ಯುವಕ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.