ಬೆಂಗಳೂರು(ಆ. 07): ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ರಚನೆಯಾಗಿ ಎರಡು ದಿನದ ಬಳಿಕ ಇದೀಗ ಖಾತೆ ಹಂಚಿಕೆ ಯಶಸ್ವಿಯಾಗಿದೆ. ಹೈಕಮಾಂಡ್ನಿಂದ ಅಧಿಕೃತವಾಗಿ ಅನುಮೋದನೆಗೊಂಡ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ.
ಸಿಎಂ ಸ್ಥಾನದ ನಂತರ ಅತ್ಯಂತ ಪ್ರಬಲ ಖಾತೆ ಎನಿಸಿದ ಗೃಹ ಖಾತೆಯನ್ನ ಅರಗ ಜ್ಞಾನೇಂದ್ರ ಅವರಿಗೆ ನೀಡಲಾಗಿದೆ. ಆದರೆ, ಹಿಂದೆ ಗೃಹ ಸಚಿವರಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ ಗುಪ್ತಚರ ವಿಭಾಗವನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ಧಾರೆ. ಬಹಳ ತಲೆನೋವೆಂದು ಪರಿಗಣಿಸಲಾಗಿರುವ ಶಿಕ್ಷಣ ಖಾತೆಯನ್ನ ಬಿ ಸಿ ನಾಗೇಶ್ ಅವರಿಗೆ ನೀಡಲಾಗಿದೆ. ಪ್ರಮುಖವಾಗಿರುವ ಇಂಧನ ಖಾತೆಯನ್ನ ವಿ ಸುನೀಲ್ ಕುಮಾರ್ ಅವರಿಗೆ ನೀಡಲಾಗಿದೆ.
ಹಿರಿಯ ಸಚಿವ ಗೋವಿಂದ ಕಾರಜೋಳ ಅವರಿಗೆ ಬಹಳ ಪ್ರಮುಖವಾದ ಜಲಸಂಪನ್ಮೂಲ ಖಾತೆಯನ್ನ ವಹಿಸಲಾಗಿದೆ. ಕೆ ಎಸ್ ಈಶ್ವರಪ್ಪ ಅವರು ಈ ಖಾತೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ, ಮುಖ್ಯಮಂತ್ರಿಗಳು ಅಂತಿಮವಾಗಿ ಕಾರಜೋಳ ಅವರಿಗೆ ಈ ಮಹತ್ವದ ಜವಾಬ್ದಾರಿ ವಹಿಸಿದ್ದಾರೆ. ಸಿಸಿ ಪಾಟೀಲ್ ಅವರಿಗೆ ಲೋಕೋಪಯೋಗಿ ಖಾತೆ ಕೊಡಲಾಗಿದೆ. ಇಲ್ಲಿ ವಲಸಿಗರಿಗೆ ಎಲ್ಲಾ ಪ್ರಮುಖ ಖಾತೆಗಳು ಹೋಗುವ ಬದಲು ಮೂಲ ಬಿಜೆಪಿಗರಿಗೂ ಕೆಲ ಪ್ರಮುಖ ಖಾತೆಗಳು ಸಿಗಲು ಕಾರಣವಾಗಿದ್ದು ಆರೆಸ್ಸೆಸ್ ಶಿಫಾರಸ್ಸಿನಿಂದ ಎಂದೆನ್ನಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಳಿ ಡಿಪಿಎಆರ್, ಹಣಕಾಸು, ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ಅಭಿವೃದ್ಧಿ ಖಾತೆಗಳನ್ನ ಇರಿಸಿಕೊಂಡಿದ್ದಾರೆ. ಹಾಗೂ ಇನ್ನೂ ಹಂಚಿಕೆಯಾಗದೇ ಉಳಿದ ಇತರೆಲ್ಲಾ ಖಾತೆಗಳು ಸದ್ಯ ಸಿಎಂ ಬಳಿಯೇ ಇರಲಿವೆ. ಬೊಮ್ಮಾಯಿ ಸಂಪುಟದ ಸಚಿವರಿಗೆ ಹಂಚಿಕೆಯಾದ ಖಾತೆಗಳು:
1) ಗೋವಿಂದ ಕಾರಜೋಳ: ಜಲಸಂಪನ್ಮೂಲ ಖಾತೆ
2) ಕೆಎಸ್ ಈಶ್ವರಪ್ಪ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ3) ಆರ್ ಅಶೋಕ್: ಕಂದಾಯ (ಮುಜರಾಯಿ ಇಲ್ಲ)
4) ಬಿ ಶ್ರೀರಾಮುಲು: ಸಾರಿಗೆ ಮತ್ತು ಎಸ್ಟಿ ಕಲ್ಯಾಣ
5) ವಿ ಸೋಮಣ್ಣ: ವಸತಿ, ಮೂಲಸೌಕರ್ಯ ಅಭಿವೃದ್ಧಿ
6) ಉಮೇಶ್ ಕತ್ತಿ: ಅರಣ್ಯ, ಆಹಾರ ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರ
7) ಎಸ್ ಅಂಗಾರ: ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ
8) ಜೆ ಸಿ ಮಾಧು ಸ್ವಾಮಿ: ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ
9) ಅರಗ ಜ್ಞಾನೇಂದ್ರ: ಗೃಹ ಖಾತೆ
10) ಡಾ. ಅಶ್ವಥ ನಾರಾಯಣ: ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ
11) ಸಿಸಿ ಪಾಟೀಲ್: ಲೋಕೋಪಯೋಗಿ
12) ಆನಂದ್ ಸಿಂಗ್: ಭೂವಿಜ್ಞಾನ ಮತ್ತು ಪರಿಸರ, ಪ್ರವಾಸೋದ್ಯಮ
13) ಕೋಟ ಶ್ರೀನಿವಾಸ ಪೂಜಾರಿ: ಸಾಮಾಜಿಕ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ
14) ಪ್ರಭು ಚೌಹಾಣ್: ಪಶು ಸಂಗೋಪನೆ
15) ಮುರುಗೇಶ್ ನಿರಾಣಿ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ
16) ಶಿವರಾಮ್ ಹೆಬ್ಬಾರ್: ಕಾರ್ಮಿಕ ಸಚಿವ
17) ಎಸ್ ಟಿ ಸೋಮಶೇಖರ್: ಸಹಕಾರ
18) ಬಿ ಸಿ ಪಾಟೀಲ್: ಕೃಷಿ
19) ಬೈರತಿ ಬಸವರಾಜು: ನಗರ ಅಭಿವೃದ್ಧಿ
20) ಡಾ. ಕೆ ಸುಧಾಕರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ
21) ಕೆ ಗೋಪಾಲಯ್ಯ: ಅಬಕಾರಿ ಖಾತೆ
22) ಶಶಿಕಲಾ ಜೊಲ್ಲೆ: ಮುಜರಾಯಿ ಮತ್ತು ಹಜ್ ವಕ್ಫ್
23) ಎಂಟಿಬಿ ನಾಗರಾಜು: ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಕೈಗಾರಿಕೆ
24) ನಾರಾಯಣಗೌಡ: ರೇಷ್ಮೆ ಖಾತೆ, ಯುವಜನ ಕ್ರೀಡೆ
25) ಬಿ. ಸಿ. ನಾಗೇಶ್: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಖಾತೆ
26) ವಿ ಸುನೀಲ್ ಕುಮಾರ್: ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ
27) ಹಾಲಪ್ಪ ಆಚಾರ್: ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕ ಸಬಲೀಕರಣ
28) ಶಂಕರ್ ಪಾಟೀಲ್ ಮುನೇನಕೊಪ್ಪ: ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಖಾತೆ
29) ಮುನಿರತ್ನ: ತೋಟಗಾರಿಕೆ ಮತ್ತು ಯೋಜನಾ ಖಾತೆ, ಸಾಂಖ್ಯಿಕ ಇಲಾಖೆ