ನಟಿ ರಮ್ಯಾ ಇಡ್ಲಿ ಪ್ರೀತಿ ನೋಡಿ ನೀರೂರಿಸಿಕೊಂಡ ಹಿಂಬಾಲಕರು!
ಅದರ ಫೋಟೋಗಳನ್ನು ಟ್ವಿಟರ್ ನಲ್ಲಿ ಪ್ರಕಟಿಸಿ, ನಗರದ ಅತ್ಯುತ್ತಮ ಉಪಾಹಾರ. ಮೃದುವಾದ, ರುಚಿಯಾದ ಇಡ್ಲಿ ಎಂದು ರಮ್ಯಾ ಬಾಯಿ ಚಪ್ಪರಿಸಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳೂ ರಮ್ಯಾಗೆ ಜೈ ಎಂದಿದ್ದಾರೆ. ಅಷ್ಟೇ ಅಲ್ಲ, ನಗರದ ಇತರ ಬೆಸ್ಟ್ ಉಪಾಹಾರದ ಹೋಟೆಲ್ ಗಳನ್ನೆಲ್ಲಾ ಪಟ್ಟಿ ಮಾಡಿಕೊಟ್ಟಿದ್ದಾರೆ. ಅಂತೂ ಅಪರೂಪಕ್ಕೆ ರಾಜಕೀಯ ಬಿಟ್ಟು ಬೇರೆ ಟ್ವೀಟ್ ಮಾಡಿದ್ದಕ್ಕೆ ಅಭಿಮಾನಿಗಳೂ ಖುಷ್ ಆಗಿದ್ದಾರೆ!