ಕೆಎಸ್ ಆರ್ ಟಿಸಿ ಬಸ್ ನಲ್ಲಿನ್ನು ನಿಮ್ಮ ಪಕ್ಕದ ಸೀಟ್ ನಲ್ಲಿ ನಾಯಿಯೂ ಕೂರಬಹುದು!

ಶನಿವಾರ, 3 ಫೆಬ್ರವರಿ 2018 (09:42 IST)
ಬೆಂಗಳೂರು: ಇದುವರೆಗೆ ನಿಮ್ಮ ಪ್ರೀತಿ ಪಾತ್ರ ಸಾಕು ಪ್ರಾಣಿಗಳನ್ನು ಕೊಂಡೊಯ್ಯುವಾಗ ಕಂಡಕ್ಟರ್ ನಿಂದ ಕಿರಿ ಕಿರಿ ಕೇಳಬೇಕಾಗಿತ್ತು. ಆದರೆ ಇನ್ನು ಹಾಗಲ್ಲ. ಟಿಕೆಟ್ ಪಡೆದು ನಾಯಿ ಬೆಕ್ಕು ಮುಂತಾದ ಸಾಕು ಪ್ರಾಣಿಗಳನ್ನು ಒಯ್ಯಲೂ ಕೆಎಸ್ ಆರ್ ಟಿಸಿ ಅವಕಾಶ ಮಾಡಿಕೊಡುತ್ತಿದೆ.
 

ಇದರ ಪ್ರಕಾರ ನಾಯಿಗೆ ಫುಲ್ ಟಿಕೆಟ್, ಬೆಕ್ಕು, ಮೊಲ ಮುಂತಾದ ಪ್ರಾಣಿಗಳಿಗೆ ಹಾಫ್ ಟಿಕೆಟ್ ನೀಡಿ ಸೀಟ್ ನಲ್ಲಿ ಕೂರಿಸಿ ಕರೆದೊಯ್ಯಬಹುದು. ಈ ಪ್ರಾಣಿಯ ಸಂಪೂರ್ಣ ಜವಾಬ್ದಾರಿ ಮಾಲಿಕರದ್ದಾಗಿರುತ್ತದೆ.

ಆದರೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ರಾಣಿಗಳನ್ನು ಕೊಂಡೊಯ್ಯುವಂತಿಲ್ಲ. ಕೋಳಿ ಮರಿ, ಪಕ್ಷಿಗಳನ್ನು ಪಂಜರದಲ್ಲಿ ಕೊಂಡೊಯ್ಯಬೇಕು. ಇತರ ಪ್ರಯಾಣಿಕರು, ಅವರ ಲಗೇಜ್ ಗಳಿಗೆ ಹಾನಿ ಮಾಡುವಂತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ