ರಾಜ್ಯ ಸರ್ಕಾರದ ಯೂನಿವರ್ಸಲ್ ಹೆಲ್ತ್ ಕಾರ್ಡ್: ಯಾರೆಲ್ಲಾ, ಹೇಗೆ ಪಡೆಯಬಹುದು?
ಇದರಿಂದ ರಾಜ್ಯದ 1 ಕೋಟಿ 43 ಲಕ್ಷ ಕುಟುಂಬಗಳು ಲಾಭ ಪಡೆಯಲಿವೆ. ವಿಶೇಷವೆಂದರೆ ಈ ಯೋಜನೆಗೆ ಕೇವಲ ಬಿಪಿಎಲ್ ಅಥವಾ ಎಪಿಎಲ್ ಕುಟುಂಬ ಎಂಬ ಷರತ್ತು ವಿಧಿಸಲಾಗಿಲ್ಲ. ಸಾಮಾನ್ಯ ಜನತೆಗೂ ಲಾಭವಾಗುವಂತೆ ಯೋಜನೆ ರೂಪಿಸಲಾಗುತ್ತಿದೆ.
ಎಲ್ಲಾ ಮಾದರಿಯ ರೋಗಗಳಿಗೂ ಈ ಕಾರ್ಡ್ ಬಳಸಿ ಸರ್ಕಾರದ ಉಚಿತ ಚಿಕಿತ್ಸೆ ಪಡೆಯಬಹುದು. ಒಂದು ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯವಿಲ್ಲದೇ ಹೋದಲ್ಲಿ ವೈದ್ಯರು ಸೂಚಿಸುವ ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರದ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬಹುದು. ತಮ್ಮ ಆಧಾರ್ ಸಂಖ್ಯೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡಿದರೆ ಹೆಲ್ತ್ ಕಾರ್ಡ್ ಉಚಿತವಾಗಿ ಒದಗಿಸಲಾಗುತ್ತದೆ! ಕಾರ್ಡ್ ಬಳಕೆ ಮಾಡಬೇಕಾದರೆ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಬೇಕು.