ರಾಹುಲ್ ಗಾಂಧಿ ಜೊತೆ ನಟಿ ರಮ್ಯಾ: ಮಂಡ್ಯದಲ್ಲಿ ಕ್ವೀನ್ ಪ್ರಚಾರ

Krishnaveni K

ಮಂಗಳವಾರ, 9 ಏಪ್ರಿಲ್ 2024 (10:07 IST)
ಮಂಡ್ಯ: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪರವಾಗಿ ನಟಿ, ಮಾಜಿ ಸಂಸದೆ ರಮ್ಯಾ ಪ್ರಚಾರ ನಡೆಸಲಿದ್ದಾರೆ. ಅವರು ರಾಜ್ಯ ಕಾಂಗ್ರೆಸ್ ನ ಸ್ಟಾರ್ ಕಾಂಪೈನರ್ ಆಗಿದ್ದಾರೆ.

ರಾಜಕೀಯ ಕಾರಣಕ್ಕಾಗಿ ರಮ್ಯಾ ಇತ್ತೀಚೆಗೆ ಉತ್ತರಾಕಾಂಡ ಸಿನಿಮಾದಿಂದಲೂ ಹೊರಬಂದಿದ್ದರು. ಇದೀಗ ರಮ್ಯಾ ಸಕ್ರಿಯರಾಗಿ ತಮ್ಮ ತವರು ಮಂಡ್ಯ ಜಿಲ್ಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇಲ್ಲಿನಿಂದಲೇ ರಮ್ಯಾ ಹಿಂದೆ ಸಂಸದೆಯಾಗಿ ಆಯ್ಕೆಯಾಗಿದ್ದವರು.

ಇದೀಗ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತಯಾಚನೆ ಮಾಡಲಿದ್ದಾರೆ. ಏಪ್ರಿಲ್ 17 ರಂದು ಮಂಡ್ಯದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಈ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.

ಈ ಸಮಾವೇಶದಲ್ಲಿ ರಾಹುಲ್ ಗಾಂಧಿ ಜೊತೆ ರಮ್ಯಾ ಕೂಡಾ ವೇದಿಕೆ ಹಂಚಿಕೊಳ್ಳಲಿದ್ದಾರೆ. ಕಾಂಗ್ರೆಸ್ ಘಟಾನುಘಟಿ ನಾಯಕರೊಂದಿಗೆ ರಮ್ಯಾ ಮಂಡ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ