ಹಾಸನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಯಡಿಯೂರಪ್ಪ ಅವರಿಗೆ ಸಲಹೆಯೊಂದನ್ನು ನೀಡುತ್ತಾ, ಸಚಿವ ಸಂಪುಟ ರಚನೆಯಾಗದೇ ಅಧಿಕಾರಿಗಳು ಶಾಸಕರ ಮಾತು ಕೇಳುತ್ತಾರೋ ಇಲ್ಲವೋ. ಈ ನಷ್ಟವನ್ನು ಅಂದಾಜು ಮಾಡಲು ಒಂದು ತಿಂಗಳಿಗೂ ಹೆಚ್ಚು ಕಾಲವಾಗಬಹುದು. ಅಧಿಕಾರಿಗಳ ಸ್ಥಳ ನಿಯೋಜನೆ ಬಿಡ್ಡಿಂಗ್ನ್ನು ಈ ಸಮಯದಲ್ಲಿ ಮುಂದಕ್ಕೆ ಹಾಕಿ. ವಾಸ್ತವಾಂಶ ಸರಿಪಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೇಂದ್ರ ಗೃಹಸಚಿವ ಅಮಿತ್ ಷಾ ವಿರುದ್ಧ ಕಿಡಿಕಾರಿದ ಅವರು, ರಾಜ್ಯದಲ್ಲಿ 4 ರಿಂದ 5 ಲಕ್ಷ ಕುಟುಂಬಗಳು ಮನೆ ಬಿಟ್ಟು ಉಟ್ಟುಬಟ್ಟೆಯಲ್ಲಿ ಬಂದಿದ್ದಾರೆ. ಕೇಂದ್ರದ ಗೃಹಸಚಿವರು ಕೇಂದ್ರದ ನಿಲುವು ಪ್ರಕಟ ಮಾಡಬೇಕಿತ್ತು. ಸಿಎಂ ಕೇಂದ್ರ ಗೃಹಸಚಿವರಿಗೆ ಮನವಿ ಮಾಡಿದ್ದಾರೆ. ಯಾವುದೇ ಪ್ರತಿಕ್ರಿಯೆ ಅಥವಾ ಭರವಸೆ ನೀಡದೆ ವಾಪಸ್ ಹೋಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.