ಸಿಲಿಕಾನ್ ಸಿಟಿಯಲ್ಲಿ ಸುರಿದ ಬಾರೀ ಮಳೆಗೆ ಅವಾಂತರ

ಶುಕ್ರವಾರ, 1 ಸೆಪ್ಟಂಬರ್ 2023 (14:51 IST)
ತಡರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ತತ್ತರಿಸಿದೆ.ನಗರದ ಹೆಬ್ಬಾಳದ ಫ್ಲೈಓವರ್ ಕೆಳಗೆ ಎದೆಯತ್ತರದಷ್ಟು ಮಳೆ ನೀರು ನಿಂತಿದೆ.ಮಳೆ ನೀರು ನಿಂತ ಕಾರಣ ಫುಲ್ ಟ್ರಾಫಿಕ್ ಜಾಮ್ ಸಂಭವಿಸಿದೆ.ಇನ್ನೂ ಜೀವ ಪಣ್ಣಕ್ಕಿಟ್ಟು  ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸಮಸ್ಯೆ ಬಗೆಹರಿಸಿದ್ದಾರೆ.
 
ರಸ್ತೆ ಮೇಲೆ ಎದೆಯತ್ತರದಷ್ಟು ನೀರು ನಿಂತಿದ್ದು,ಮಳೆ ನೀರು ಹೋಗುವ ಜಾಗ ಕಸದಿಂದ ಬ್ಲಾಕ್ ಆಗಿತ್ತು.ಇದರಿಂದ ಮಳೆ ನೀರು ನಿಂತಿರೋದನ್ನ ಅರಿತ ಪೊಲೀಸ್ ಸಿಬ್ಬಂದಿ ತಕ್ಷಣ ಕಬ್ಬಿಣ ರಾಡ್ ತೆಗೆದುಕೊಂಡು ಹೋಗಿ ಮಳೆ ನೀರು ಹೋಗುವಂತೆ ಮಾಡಿದ್ದಾರೆ.ಬೊಮ್ಮನಹಳ್ಳಿಯ ಸಿಲ್ಕ್ ‌ಬೋರ್ಡ್ ಜಂಕ್ಷನ್ ನಲ್ಲಿ ನೀರು ನಿಂತು ಕೂಡ ಅವಾಂತರವಾಗಿದೆ.ರಸ್ತೆಯ ತುಂಬೆಲ್ಲಾ ನೀರು ನಿಂತು ವಾಹನ ಸವಾರರು ಪರದಾಟ ನಡೆಸಿದ್ದಾರೆ.
 
ಗಂಟೆ ಗಟ್ಟಲೆ ಟ್ರಾಫಿಕ್ ಸಮಸ್ಯೆ ಯಿಂದ ಒಂದು ಕಡೆ ವಾಹನಸವಾರರು ಪರದಾಟ ನಡೆಸಿದ್ದಾರೆ.ಕೆಲವು ವಾಹನ ಗಳು ನೀರಿನಲ್ಲಿ 
ಕೆಟ್ಟು ನಿಂತು, ಪರದಾಡಿದ್ರು.ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತ ಕಾರಣ ಶಿವಾನಂದ ಸರ್ಕಲ್ ಬಳಿಯ ಅಂಡರ್ ಪಾಸ್ ನಲ್ಲಿ ಖಾಸಗಿ ಬಸ್ ಕೆಟ್ಟು ಸಿಲುಕಿದೆ. ನಿನ್ನೆ ತಡರಾ‌ತ್ರಿ ರಾಜಧಾನಿ ಬೆಂಗಳೂರಿನ ಭಾರಿ ಅನಾಹುತವಾಗಿದೆ.ಧಾರಾಕಾರ ಮಳೆಗೆ ನಗರದ ಹಲವು ಏರಿಯಾ ಜಲಾವೃತ, ಮನೆಗೆ, ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದೆ.ಬೆಂಗಳೂರಿನ ಶಾಂತಿನಗರ, ಕಲಾಸಿಪಾಳ್ಯ, ಸಿಟಿ ಮಾರ್ಕೇಟ್, ಜಯನಗರ, ವಿಲ್ಸನ್ ಗಾರ್ಡನ್, ಎಂಜಿ ರಸ್ತೆ, ವಿವೇಕ ನಗರ, ಕೋರಮಂಗಲ, ಎಚ್.ಎಸ್.ಆರ್ ಲೇಔಟ್, ಬೆಳ್ಳಂದೂರು, ವರ್ತೂರು, ಸರ್ಜಾಪುರ, ಮಾರತ್ಹಳ್ಳಿ, ಕಾಡುಗೋಡಿ, ವೈಟ್ ಫೀಲ್ಡ್, ಕೆ.ಆರ್.ಪುರಂ ಸೇರಿದಂತೆ ನಗರದ ಹಲವೆಡೆ ಭಾರಿ ಮಳೆಯಾಗಿದೆ.
 
ಇತ್ತ ದಿಢೀರ್‌ ಮಳೆಗೆ ಬೆಂಗಳೂರಿನ ರಸ್ತೆಗಳು ಜಲಾವೃತವಾಗಿದೆ.ಹೆಬ್ಬಾಳದಲ್ಲಿ ತಗ್ಗು ಪ್ರದೇಶದ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ.ಇತ್ತಾ ಸೆಪ್ಟೆಂಬರ್‌ 2 ರಿಂದ 7 ರವೆರೆಗೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ