ಕೈ ಕೊಟ್ಟ ಮಳೆಗಾಗಿ ಜನರ ಪ್ರಾರ್ಥನೆ

ಗುರುವಾರ, 31 ಆಗಸ್ಟ್ 2023 (16:30 IST)
ಕೊಪ್ಪಳ ತಾಲ್ಲೂಕಿನ ಬೆಟಗೇರಿ ಗ್ರಾಮದಲ್ಲಿ ಕೈ ಕೊಟ್ಟ ಮಳೆಗಾಗಿ ಜನರ ಪ್ರಾರ್ಥನೆ ಸಲ್ಲಿಸಿದ್ದಾರೆ. ಗುರ್ಜಿ ಹೊತ್ತು ಮಳೆಗಾಗಿ ಜನರು ಪ್ರಾರ್ಥನೆ ಮಾಡಿದ್ದಾರೆ. ಮಳೆ ಇಲ್ಲದೆ ಕಂಗಾಲಾದ ರೈತರು, ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ, ಕಾಚ ಕೊಡ್ತೀನಿ ಕಚ ಮಳೆಯೇ, ಸುಣ್ಣ ಕೊಡ್ತೀನಿ ಸುರಿಯೇ ಎಂದು ಪ್ರಾರ್ಥನೆ ಮಾಡಿದ್ದಾರೆ. ಅರೆಬೆತ್ತಲೆಯಾಗಿ ತಲೆಯ ಮೇಲೆ ಗುರ್ಜಿ ಹೊತ್ತು ಪ್ರಾರ್ಥನೆ ಸಲ್ಲಿಸಿದ್ದಾರೆ. ಗುರ್ಜಿ ಹೊತ್ತು ಮನೆ ಮನೆಗೆ ಹೋಗಿ ಯುವಕ ನೀರು ಹಾಕಿಸಿಕೊಳ್ಳುತ್ತಿದ್ದಾನೆ. ಗುರ್ಜಿ ಆಡುವುದರಿಂದ ಮಳೆ ಬರುತ್ತೆ ಎಂಬ ನಂಬಿಕೆ ಈ ಪ್ರಾಂತ್ಯದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ