ಬಿಯರ್ ಪ್ರಿಯರಿಗೆ ಬೆಲೆ ಏರಿಕೆ ಶಾಕ್ ಬೆನ್ನಲ್ಲೇ ಮೆಟ್ರೋ ಪ್ರಯಾಣಿಕರಿಗೂ ದರ ಏರಿಕೆ ಶಾಕ್ ಗ್ಯಾರಂಟಿ

Krishnaveni K

ಮಂಗಳವಾರ, 21 ಜನವರಿ 2025 (11:28 IST)
ಬೆಂಗಳೂರು: ಇತ್ತೀಚೆಗಷ್ಟೇ ಬಸ್ ಪ್ರಯಾಣ ದರ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಈಗ ಬಿಯರ್ ಪ್ರಿಯರಿಗೆ ದರ ಏರಿಕೆ ಶಾಕ್ ಕೊಟ್ಟಿದೆ. ಇನ್ನೀಗ ಮೆಟ್ರೋ ಪ್ರಯಾಣಿಕರಿಗೂ ದರ ಏರಿಕೆ ಬಿಸಿ ತಗುಲುವ ಸೂಚನೆ ಸಿಕ್ಕಿದೆ.

ಇತ್ತೀಚೆಗೆ ರಾಜ್ಯ ಸರ್ಕಾರ ಬಸ್ ಪ್ರಯಾಣ ದರವನ್ನು ಶೇ.15 ರಷ್ಟು ಏರಿಕೆ ಮಾಡಿತ್ತು. ಇದರ ಬೆನ್ನಲ್ಲೇ ಪಾನಪ್ರಿಯರಿಗೂ ಶಾಕ್ ಕೊಟ್ಟಿದೆ. ಕೆಲವು ಆಯ್ದ ಬ್ರ್ಯಾಂಡ್ ನ ಬಿಯರ್ ಗಳ ದರವನ್ನು 10 ರೂ. ನಿಂದ 45 ರೂ.ವರೆಗೆ ಏರಿಕೆ ಮಾಡಲಾಗಿದೆ.

ಬಿಯರ್ ದರ ಏರಿಕೆ ದರ ಘೋಷಣೆ ನಿನ್ನೆ ಮಾಡಲಾಗಿದ್ದು ತಕ್ಷಣದಿಂದಲೇ ದರ ಏರಿಕೆ ಜಾರಿಗೆ ಬರಲಿದೆ ಎಂದಿದೆ. ಇದರ ಬೆನ್ನಲ್ಲೇ ಈಗ ಮೆಟ್ರೋ ಪ್ರಯಾಣ ದರವೂ ಏರಿಕೆಯಾಗುವ ಸಾಧ್ಯತೆಯಿದೆ. ನಮ್ಮ ಮೆಟ್ರೋ ಪ್ರಯಾಣ ದರದಲ್ಲಿ ಶೇ.30 ರಿಂದ 40 ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

ಮುಂದಿನ ವಾರದಿಂದಲೇ ಮೆಟ್ರೋ ಪ್ರಯಾಣ ದರ ತುಟ್ಟಿಯಾಗುವ ಸಾಧ್ಯತೆಯಿದೆ. ಎಲ್ಲಾ ಸರಿ  ಹೋಗಿದ್ದರೆ ಈಗಾಗಲೇ ಬಿಎಂಆರ್ ಸಿಎಲ್ ಮೆಟ್ರೋ ದರ ಏರಿಕೆ ಘೋಷಣೆ ಮಾಡಬೇಕಿತ್ತು. ಆದರೆ ಇಂತಹದ್ದೊಂದು ಸುದ್ದಿ ಬರುತ್ತಿದ್ದಂತೇ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಘೋಷಣೆ ಮುಂದೂಡಿದೆ. ಆದರೆ ಮುಂದಿನ ವಾರದಿಂದ ಪ್ರಯಾಣ ದರ ಏರಿಕೆ ಮಾಡುವ ಘೋಷಣೆ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ