ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಮತ್ತೆ ಮಳೆ ಇದೆಯೇ ಇಲ್ಲಿದೆ ವರದಿ

Krishnaveni K

ಮಂಗಳವಾರ, 21 ಜನವರಿ 2025 (09:20 IST)
ಬೆಂಗಳೂರು: ಮೊನ್ನೆಯಷ್ಟೇ ದಿಡೀರ್ ಆಗಿ ರಾಜ್ಯದ ಹಲವು ಭಾಗಗಳಲ್ಲಿ ತುಂತುರು ಮಳೆಯಾಗಿತ್ತು. ಇದೀಗ ಮತ್ತೆ ಸದ್ಯದಲ್ಲೇ ಮಳೆಯಾಗುವ ಸೂಚನೆಯಿದೆಯೇ ಎಂಬ ಪ್ರಶ್ನೆಗೆ ಹವಾಮಾನ ಇಲಾಖೆ ವಿವರಣೆ ನೀಡಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಮೊನ್ನೆ ಮಳೆಯಾಗಿತ್ತು. ನಿನ್ನೆ ಕೂಡಾ ಮಳೆಯಾಗುವ ಸೂಚನೆಯಿತ್ತಾದರೂ ಬಳಿಕ ಸುಳ್ಳಾಗಿದೆ. ನಿನ್ನೆಯಿಡೀ ಶುಭ್ರ ಆಕಾಶವಿತ್ತು.

ಇದೀಗ ಹವಾಮಾನ ಇಲಾಖೆ ವರದಿ ಪ್ರಕಾರ ಜನವರಿ 25 ರವರೆಗೆ ಮಳೆಯಾಗುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಜನವರಿ 25 ರವರೆಗೂ ರಾಜ್ಯದಲ್ಲಿ ತೀವ್ರ ಚಳಿ, ಒಣ ಹವೆ ಮುಂದುವರಿಯಲಿದೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 19 ಡಿಗ್ರಿಯವರೆಗೆ ಇರಲಿದೆ ಎಂದು ಹೇಳಲಾಗಿದೆ. ಮುಂದಿನ ವಾರದಲ್ಲೂ ಮಳೆಯಾಗುವ ಸಾಧ್ಯತೆ ತೀರಾ ಕಡಿಮೆ. ಹಾಗಿದ್ದರೂ ಕೆಲವು ಕಡೆ ಮೋಡ ಕವಿದ ವಾತಾವರಣವಿರಬಹುದು. ಅದರ ಹೊರತಾಗಿ ಮಳೆಯ ಸಾಧ್ಯತೆ ಕಡಿಮೆ ಎಂದೇ ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ