ಪ್ರಧಾನಿ ಮೋದಿ ರಾಜಧಾನಿ ಪ್ರವೇಶ ಬೆನ್ನಲ್ಲೇ ಶುರುವಾಯ್ತು ಪ್ರತಿಭಟನೆಗಳ ಕಾವು

ಸೋಮವಾರ, 6 ಫೆಬ್ರವರಿ 2023 (14:27 IST)
ಸರ್ಕಾರದ ವಿರುದ್ಧ ಮತ್ತೆ ವಿವಿಧ ಸಂಘಟನೆಗಳು ಸಮರಸಾರಿದೆ.ಇಂದು ಫ್ರೀಡಂಪಾರ್ಕ್ ನಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮಾಡ್ತಿದೆ.ಒಂದು ಕಡೆ ಸಾರಿಗೆ ನೌಕರರು ಅನಿರ್ದಿಷ್ಟ ಅವಧಿ ಪ್ರತಿಭಟನೆ ಕೈಗೊಂಡಿದ್ರೆ ಇನ್ನೊಂದು ಕಡೆ ಬೆಂಗಳೂರು ಚಲೋಗೆ ಕರೆಕೊಟ್ಟ ಬಿಎಂಎಸ್ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ.
 
ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಮತ್ತೆ  ಸಾರಿಗೆ ನೌಕರರು ಹಾಗೂ ಆರೋಗ್ಯ ಸಿಬ್ಬಂದಿ ರಸ್ತೆಗಿಳಿದಿದ್ದಾರೆ.ಸಾರಿಗೆ ಇಲಾಖೆಯ 4 ನಿಗಮಗಳ ನೌಕರರಿಂದ ಪ್ರತಿಭಟನೆ ನಡೆಯುತ್ತಿದೆ.ಫ್ರೀಡಂಪಾರ್ಕ್ ನಲ್ಲಿ ಕುಟುಂಬ ಸಮೇತ ಅನಿರ್ದಿಷ್ಟ ಅವಧಿಯನ್ನ  ಸಾರಿಗೆ ನೌಕರರು ನಡೆಸುತ್ತಿದ್ದಾರೆ.
 
ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ನೌಕರರು ಭಾಗಿಯಾಗುದ್ದು,ಬಸ್ ಸಂಚಾರದಲ್ಲಿ ಯಾವುದೇ ಅಡೆತಡೆ ಇಲ್ಲದಂತೆ ಪ್ರತಿಭಟನೆ ಮಾಡ್ತಿದ್ದಾರೆ.ಅನಿರ್ದಿಷ್ಟಾವಧಿ ಧರಣಿ ನಡುವೆ ಎಂದಿನಂತೆ ಬಸ್ ಗಳ ಸಂಚಾರ ಇದೆ.
 
ರಾಜ್ಯ ಸರ್ಕಾರದ ವಿರುದ್ಧ  ಬಿಎಂಎಸ್ ಸಂಘ ತಿರುಗಿಬಿದ್ದಿದೆ.ಸರ್ಕಾರದ ವಿರುದ್ಧ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯದ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಇಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ.ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾಗಿಯಾಗಲಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ