ತಮಿಳುನಾಡು ಬಳಿಕ ಕರ್ನಾಟಕದಲ್ಲೂ ಬದಲಾಗುತ್ತಾ ರೂಪಾಯಿ ಚಿಹ್ನೆ: ಇದು ಸರೀನಾ
ಕೇಂದ್ರದ ವಿರುದ್ಧ ತಿರುಗಿ ಬಿದ್ದಿರುವ ಡಿಎಂಕೆ, ಒಂದು ಕಾಲದಲ್ಲಿ ತನ್ನದೇ ಪಕ್ಷದ ನಾಯಕ ಅನುಮೋದಿಸಿದ್ದ ರೂಪಾಯಿ ಚಿಹ್ನೆಯನ್ನು ಬಹಿಷ್ಕರಿಸಿ ತಮಿಳಿನಲ್ಲಿಯೇ ರೂಪಾಯಿ ಚಿಹ್ನೆ ಬರೆದುಕೊಂಡಿತ್ತು. ಇದು ಹಿಂದಿ ಹೇರಿಕೆ ಎನ್ನುವುದು ಡಿಎಂಕೆ ವಾದವಾಗಿದೆ.
ಇದೀಗ ಕರ್ನಾಟಕದಲ್ಲೂ ಬದಲಾವಣೆಯಾಗಬೇಕು ಎಂದು ಕೆಲವು ಕನ್ನಡ ಪರ ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ. ನಮಗೆ ಹಿಂದಿ ಬೇಡ, ಕನ್ನಡ ಅದಕ್ಕಿಂತಲೂ ಹಳೆಯ ಭಾಷೆ. ಕನ್ನಡದಲ್ಲೇ ರೂ. ಚಿಹ್ನೆ ಬಳಸೋಣ ಎಂದು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಡಿಎಂಕೆ ನಾಯಕರು ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಕೇಂದ್ರದ ವಿರುದ್ಧ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ಈಗ ಕರ್ನಾಟಕದಲ್ಲೂ ಸರ್ಕಾರವೇ ರೂಪಾಯಿ ಚಿಹ್ನೆ ಕನ್ನಡಕ್ಕೆ ಬದಲಾವಣೆ ಮಾಡುತ್ತಾ ನೋಡಬೇಕಿದೆ.